ಗಡ್ವಾಲ್ ಹಿಮಾಲಯದ ಪಶ್ಚಿಮ ಭಾಗದಲ್ಲಿ ಕೇದಾರನಾಥ ಪರ್ವತವಿದೆ. ಇಲ್ಲಿ ಎರಡು ಪರ್ವತಗಳು ಹೆಸರುವಾಸಿ ಒಂದು ಕೇದಾರನಾಥ ಇನ್ನೊಂದು ಕೇದಾರನಾಥ ಡೋಮ್. ಕೇದಾರನಾಥ ಡೋಮ್ ಉಪ ಪರ್ವತವಾಗಿದೆ. ಮುಖ್ಯ ಪರ್ವತಕ್ಕೆ ಎರಡು ಕಿ.ಮೀ. ದೂರದಲ್ಲಿದೆ. ಗಂಗೋತ್ರಿ ಹಿಮಾಚ್ಛಾದಿತ ಪ್ರದೇಶದ ಅತಿ ಎತ್ತರದ ಮೂರು ಪರ್ವತಗಳಲ್ಲಿ ಇವೆರಡು ಸೇರಿವೆ. ಕೇದಾರನಾಥ ಡೋಮ್ ಆಧುನಿಕ ಸಾಹಸ ಕ್ರೀಡೆಯಾದ ಸ್ಕೀಯಿಂಗ್ ಗೆ ಸೂಕ್ತವಾದ ತಾಣವಾಗಿದ್ದು, ಸಾಕಷ್ಟು ಜನಪ್ರಿಯವಾಗಿದೆ.


Click it and Unblock the Notifications