Search
  • Follow NativePlanet
Share
ಮುಖಪುಟ » ಸ್ಥಳಗಳು » ಕೇದಾರನಾಥ » ಆಕರ್ಷಣೆಗಳು » ವಾಸುಕಿ ತಾಲ್

ವಾಸುಕಿ ತಾಲ್, ಕೇದಾರನಾಥ

2

ವಾಸುಕಿ ತಾಲ್‌ ಇರುವುದು ಸಮುದ್ರ ಮಟ್ಟದಿಂದ 4135 ಮೀಟರ್‌ ಎತ್ತರದಲ್ಲಿ. ಕೇದಾರನಾಥದಿಂದ 8 ಕಿ.ಮೀ. ದೂರದಲ್ಲಿದೆ. ಈ ಕೆರೆಯು ಹಿಮಾಲಯ ಪರ್ವತಗಳಿಂದ ಸುತ್ತುವರಿಯಲ್ಪಟ್ಟಿದ್ದು, ಅತ್ಯಾಕರ್ಷಕವಾಗಿ ಗೋಚರಿಸುತ್ತದೆ. ಉತ್ತರಖಂಡ ರಾಜ್ಯದ ಒಂದು ಖಾಯಂ ಪ್ರವಾಸಿತಾಣವಾಗಿ ಇದು ಜನಪ್ರಿಯವಾಗಿದೆ. ಇಲ್ಲಿ ಬರುವ ಪ್ರವಾಸಿಗರಿಗೆ ಲಭಿಸುವ ಇನ್ನೊಂದು ಆಕರ್ಷಕ ನೋಟ ಚೌಖಂಬಾ ಪರ್ವತಗಳ ಶೃಂಗಗಳ ವೀಕ್ಷಣೆ. ಇವು ಕೂಡ ಕೆರೆಗೆ ಸಮೀಪದಲ್ಲಿಯೇ ಇರುವುದರಿಂದ ಈ ತಾಣ ಇನ್ನಷ್ಟು ಜನಪ್ರಿಯವಾಗಿದೆ.

ಪ್ರವಾಸಿಗರು ಇಲ್ಲಿ ತಲುಪುವ ಮಾರ್ಗದಲ್ಲಿ ಚತುರಂಗಿ ಹಾಗೂ ವಾಸುಕಿಯನ್ನು ವೀಕ್ಷಿಸಿ ಮುಂದೆ ಬಂದಿರುತ್ತಾರೆ. ಈ ಮಾರ್ಗದಲ್ಲಿ ಬರುವುದು ಸುಲಭವೇನಲ್ಲ. ಸಾಕಷ್ಟು ಕಷ್ಟ, ಸವಾಲುಗಳನ್ನು ಎದುರಿಸಿದ ನಂತರವೇ ಈ ಆಕರ್ಷಕ ಹಾಗೂ ರಮಣೀಯ ನೋಟ ಒಳಗೊಂಡ ತಾಣ ದರ್ಶಿಸಲು ಸಾಧ್ಯ. ಇಲ್ಲಿ ತಲುಪುವ ಹೊತ್ತಿಗೆ ಸಾಕಷ್ಟು ಸಾಮರ್ಥ್ಯ ಹಾಗೂ ಶಕ್ತಿ ಕುಂದಿರುತ್ತದೆ. ಪ್ರವಾಸಿಗರು ಈ ತಾಣ ಸಂದರ್ಶಿಸುವುದಾದರೆ ಜೂನ್‌ ತಿಂಗಳಿಂದ ಅಕ್ಟೋಬರ್‌ ನಡುವಿನ ಅವಧಿಯಲ್ಲಿ ಬರುವುದು ಉತ್ತಮ ಎಂಬ ಸಲಹೆ ನೀಡಲಾಗುತ್ತದೆ. ಈ ಸಮಯದಲ್ಲಿ ವಾತಾವರಣ ಇಲ್ಲಿ ಸಹನೀಯವಾಗಿರುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat