ಮಧಾಬ್ದೇವ್ ಥಾನ್ ಶ್ರೀ ಶ್ರೀ ಮಧಾಬ್ದೇವ್ರವರ ಜನ್ಮಸ್ಥಳವಾಗಿದೆ. ಇದು ಶ್ರೀಮಂತ ಶಂಕರದೇವರವರ ಅನುಯಾಯಿಗಳಿಗೆ ಅತ್ಯಂತ ಶ್ರದ್ಧಾ ಭಕ್ತಿಯ ತಾಣವಾಗಿದೆ. ಮಧಾಬ್ದೇವ್ ಥಾನ್ರವರು ಲೆಟೆಕು ಪುಖುರಿ ಎಂದು ಸಹ ಕರೆಯಲ್ಪಡುತ್ತದೆ. ಇದು ಬೊರ್ಬಾಲಿ ಹಳ್ಳಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಲೆಟೆಕು ಪುಖುರಿಯು ಅಸ್ಸಾಂನ ಲಕ್ಷ್ಮೀ ನಾರಾಯಣ್ ಪುರ್ ಜಿಲ್ಲೆಯಲ್ಲಿ ನೆಲೆಗೊಂಡಿದೆ.
ಶ್ರೀ ಶ್ರೀ ಮಧಬ್ದೇವ್ರವರು 1489ರಲ್ಲಿ ಜನಿಸಿದರು. ಇವರು ಅಸ್ಸಾಂನಲ್ಲಿ ವೈಷ್ಣವ ಸಂಸ್ಕೃತಿಯನ್ನು ಪ್ರತಿಪಾದಿಸಿದ ಪ್ರಮುಖ ಮುಖಂಡರಾಗಿದ್ದರು. ಇವರು ಕೇವಲ ಶ್ರೀಮಂತ ಶಂಕರದೇವರವರ ಕಟ್ಟಾ ಅನುಯಾಯಿಯಾಗಿದ್ದಷ್ಟೇ ಅಲ್ಲದೆ, ತಮ್ಮ ಕಲಾ ನೈಪುಣ್ಯತೆಯಿಂದಾಗಿ ಸಹ ಹೆಸರುವಾಸಿಯಾಗಿದ್ದರು. ಶ್ರೀಮಂತ ಶಂಕರದೇವರವರ ಸಾವಿನ ಬಳಿಕ ಅಸ್ಸಾಂನ ವೈಷ್ಣವರು ಶ್ರೀ ಶ್ರೀ ಮಧಾಬ್ದೇವ್ರವರನ್ನು ತಮ್ಮ ಧಾರ್ಮಿಕ ಗುರುವೆಂದು ಪರಿಗಣಿಸಿದರು. ಶ್ರೀ ಶ್ರೀ ಮಧಾಬ್ದೇವ್ರವರು " ಬೊರ್ಗೀಟ್ಸ್" ಅಥವಾ ದೇವರ ಸ್ತೋತ್ರಗಳನ್ನು ರಚಿಸುವುದಕ್ಕೆ ಹೆಸರುವಾಸಿಯಾಗಿದ್ದರು. ಇವುಗಳನ್ನು ಇಂದಿಗು ನಾಮ್ಗಡ್ನಲ್ಲಿ ವಾಚನ ಮಾಡುವುದನ್ನು ಮತ್ತು ಹಾಡುವುದನ್ನು ನೋಡಬಹುದು.
ಮಧಾಬ್ದೇವ್ ಥಾನ್ನಲ್ಲಿ ಶ್ರೀ ಶ್ರೀ ಮಧಾಬ್ದೇವ್ರವರಿಗೆ ಸೇರಿದ ಪವಿತ್ರ ಗ್ರಂಥಗಳ ಬೃಹತ್ ಸಂಗ್ರಹವನ್ನು, ಸಾಂಸ್ಕೃತಿಕ ಮತ್ತು ಪ್ರಾಚೀನ ಲೇಖನಗಳ ಹಸ್ತಪ್ರತಿಗಳನ್ನು ನಾವು ಕಾಣಬಹುದು. ಈ ಎಲ್ಲಾ ವಸ್ತುಗಳನ್ನು ಪ್ರವಾಸಿಗರು ಇಲ್ಲಿ ವೀಕ್ಷಿಸಬಹುದಾಗಿದೆ.