ಶಿವ ದೇವಸ್ಥಾನ ಮಹಾಬಿಲ್ವಕೇಶ್ವರ ಮಂದಿರ ಕತುವಾ ಜಿಲ್ಲೆಯ ಪ್ರಸಿದ್ದ ಸ್ಥಳಗಳಲ್ಲೊಂದು. ಈ ಮುಂಚೆ ಹರಿಹರ ದೇವಸ್ಥಾನವೆಂಬ ಹೆಸರಿತ್ತು. ಆದರೆ ಇಲ್ಲಿನ ಬಿಲ್ವ ಪತ್ರೆಯ ಅಸಂಖ್ಯ ಮರಗಳಿಂದಾಗಿ ಮಹಾಬಿಲ್ವಕೇಶ್ವರ ಎಂಬ ಹೆಸರು ಬಂತು. ಶಿವನಿಗೆ ಬಿಲ್ವ ಪತ್ರೆ ಬಹಳ ಇಷ್ಟ ಎಂಬ ಕಾರಣಕ್ಕೆ ಭಕ್ತರು ಬಿಲ್ವಪತ್ರೆಯ ಸೇವೆ ನೀಡುತ್ತಾರೆ.
ದೇವಸ್ಥಾನದ ಪವಿತ್ರ ಸ್ಥಳ 60 ಅಡಿ ಎತ್ತರದಲ್ಲಿದೆ ಮತ್ತು ಚಚ್ಚೌಕಾರದ ವೇದಿಕೆಯ ಮೇಲೆ ನಿಂತಿದೆ. ಗಣೇಶ, ಬ್ರಹ್ಮ, ಭೈರವ, ವಿಷ್ಣು ಮತ್ತು ಐದು ತಲೆಯುಳ್ಳ ಶಿವನ ಮೂರ್ತಿಯು ಇಲ್ಲಿದೆ. ಪುರಾಣಗಳ ಪ್ರಕಾರ, ಪಾಂಡವರು ತಮ್ಮ ವನವಾಸದ ಟೈಮಲ್ಲಿ ಇದೇ ಸ್ಥಳದಲ್ಲಿ ಪೂಜೆ ಸಲ್ಲಿಸಿದ್ದರು.


Click it and Unblock the Notifications