ಕರ್ನಾಲಾದ ಸಮೀಪವಿರುವ ಅಂಬರನಾಥದಲ್ಲಿ ಶಿವ ದೇವಾಲಯವಿದೆ. ಇದನ್ನು ಕ್ರಿ.ಶ 1060 ರ ಅವಧಿಯ ಶಿಲಾಹರ ರಾಜವಂಶದ ಅರಸ ಮನ್ಮುನಿರಾಜ ಕಟ್ಟಿಸಿದ ಎಂದು ನಂಬಲಾಗಿದೆ.
ಇಲ್ಲಿನ ಒಳಗಿನ ಕೆತ್ತನೆಗಳು ಮತ್ತು ಸೂಕ್ಷವಾದ ರಚನೆಗಳು ನಿಮ್ಮನ್ನು ದಿಗ್ಮೂಢರನ್ನಾಗಿಸಿದರೆ ಆಶ್ಚರ್ಯವಿಲ್ಲ. ಅವು ವೈಷ್ಣವ ಮತ್ತು ಶೈವ ಪುರಾಣಗಳ ಕಥೆಗಳನ್ನು ಹೇಳುತ್ತವೆ.
ಇಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಭಕ್ತ ಮಹಾಪೂರವೇ ಹರಿದು ಬರುತ್ತದೆ. ಈ ಸಮಯದಲ್ಲಿನ ವಿಶೇಷ ಪೂಜೆಗಳು ಶಿವಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ.
ಇದು ಶೈವ ಮತ್ತು ವೈಷ್ಣವ ಎರಡೂ ಪಂಥದ ಭಕ್ತರು ಬರುವ ಒಂದು ವಿಶೇಷವಾದ ಸ್ಥಳವಾಗಿದೆ.


Click it and Unblock the Notifications