ಟರೌರಿ ಎಂಬುದು ಹರಿಯಾಣ ಒಂದು ಸಣ್ಣ ಪಟ್ಟಣವಾದರೂ ಸಹ ತನ್ನ ಐತಿಹಾಸಿಕ ಮಹತ್ವದಿಂದಾಗಿ ಭಾರೀ ಪ್ರಸಿದ್ಧಿಗೆ ಕಾರಣವಾಗಿದೆ. ಇದು ಕರ್ನಾಲ್‍ನ ಸ್ಯಾಟಲೈಟ್ ಟೌನ್ ಆಗಿದ್ದು, ನಗರದ ಕೇಂದ್ರ ಭಾಗದಿಂದ ಹನ್ನೊಂದು ಮೈಲು ದೂರದಲ್ಲಿ ನೆಲೆಗೊಂಡಿದೆ. ಟರೌರಿಯು ಭಾರತದ ಇತಿಹಾಸವನ್ನು ಬದಲಾಯಿಸಿದ ಊರಾಗಿದೆ. ಇಲ್ಲಿ ಕ್ರೂರಿ ಮತ್ತು ಲೂಟಿಕೋರನಾದ ಮಹಮ್ಮದ್ ಘೌರಿ ಹಾಗು ಶೂರನು ಮತ್ತು ಧೀರನು ಆದ ಪೃಥ್ವಿ ರಾಜ ಚೌಹನನ ನಡುವೆ ನಡೆದ ಯುದ್ಧದಲ್ಲಿ ದೆಹಲಿಯ ರಾಜನಾದ ಪೃಥ್ವಿರಾಜನು ಸೋತುಹೋದನು. ಇದು ಭಾರತದಲ್ಲಿ ಮುಸ್ಲಿಂರ ಆಳ್ವಿಕೆಗೆ ಮುನ್ನುಡಿ ಬರೆಯಿತು.
ಇದು ಮುಸ್ಲಿಂ ರಾಜರಲ್ಲಿಯೇ ಅತ್ಯಂತ ಕ್ರೂರಿ ಹಾಗು ಮತಾಂಧನಾದ ಔರಂಗಜೇಬನ ಮಗ ಅಜಾಮ್‍ನ ಹುಟ್ಟೂರು ಸಹ ಹೌದು. ಈತನು ಈ ಪಟ್ಟಣದ ಸುತ್ತ ಒಂದು ಗೋಡೆಯನ್ನು, ಮಸೀದಿಯನ್ನು ಮತ್ತು ಕೆರೆಯನ್ನು ನಿರ್ಮಿಸಿದನು. ಈ ಕೆರೆಯನ್ನು ಇಂದಿಗು ಸಹ ನಾವು ಕಾಣಬಹುದು. ಈ ಪಟ್ಟಣದಲ್ಲಿ ಒಂದು ಸರಾಯ್ ಸಹ ಇದೆ. ಇದನ್ನು ಮೊಘಲರ ಕಾಲದಲ್ಲಿ ನಿರ್ಮಿಸಲಾಯಿತು. ಮುಂದೆ ಇದನ್ನು ಸಿಖ್ಖರು ತಮ್ಮ ಕೋಟೆಯಾಗಿ ಬಳಸಿದರು.
ಈ ಪಟ್ಟಣದಲ್ಲಿ ಸಿಖ್ಖರ ಐತಿಹಾಸಿಕ ಮಹತ್ವವನ್ನು ಹೊಂದಿರುವ ಗುರುದ್ವಾರ ಸಿಸ್ ಗಂಜ್ ಸಾಹಿಬ್ ಎಂಬ ಮಂದಿರ ಸಹ ಇದೆ. ಟರೌರಿಯು ಭಾರತದಲ್ಲಿಯೇ ಅತ್ಯಂತ ಉತೃಷ್ಟ ದರ್ಜೆಯದು ಎಂದು ಭಾವಿಸಲಾಗಿರುವ ಬಾಸುಮತಿ ಅಕ್ಕಿಯನ್ನು ಉತ್ಪಾದಿಸುವುದಕ್ಕೆ ಹೆಸರುವಾಸಿಯಾಗಿದೆ. ಇದು ತನ್ನ ಸ್ವಾದ ಮತ್ತು ರುಚಿಗಾಗಿ ವಿಶ್ವದಲ್ಲಿಯೇ ಹೆಸರುವಾಸಿಯಾಗಿದೆ.


Click it and Unblock the Notifications