Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲ್ » ಆಕರ್ಷಣೆಗಳು » ನರೈನ

ನರೈನ, ಕರ್ನಾಲ್

1

ಕರ್ನಾಲ್‍ನಿಂದ 11 ಕಿ.ಮೀ ಮತ್ತು ಟರೌರಿಯಿಂದ 5 ಕಿ.ಮೀ ದೂರದಲ್ಲಿರುವ ನರೈನ ಒಂದು ಸ್ಯಾಟಲೈಟ್ ಟೌನ್ ಆಗಿದ್ದು, ಭಾರತದ ಇತಿಹಾಸದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುವ ಸ್ಥಳವಾಗಿ ಇದು ಗುರುತಿಸಲ್ಪಟ್ಟಿದೆ. ಟರೌರಿಯಲ್ಲಿ ಶಹಬ್- ಉದ್-ದಿನ್ ಮುಹಮ್ಮದ್ ಘೋರಿಯು (ಮಹಮ್ಮದ್ ಬಿನ್ ಸಮ್ ಎಂದು ಸಹ ಕರೆಯಲ್ಪಡುತ್ತಿದ್ದನು) ಕ್ರಿ.ಶ.1191ರಲ್ಲಿ ದೆಹಲಿಯ ರಾಜ ಪೃಥ್ವಿರಾಜ ಚೌಹನನಿಂದ ಸೋಲಿಸಲ್ಪಟ್ಟನು. ಆಗ ಆದ ಕದನ ವಿರಾಮದ ಒಪ್ಪಂದದಂತೆ ಮರಳಿ ಹೋಗಿದ್ದ ಮಹಮ್ಮದ್ ಘೋರಿಯ ಮನದಲ್ಲಿ ಅಶಾಂತಿ ಮತ್ತು ಅಸಮಾಧಾನ ಹೊಗೆಯಾಡುತ್ತಿತ್ತು. ಇದರ ಫಲವಾಗಿ ಮುಂದಿನ ವರ್ಷ ಮತ್ತೆ ದಂಡೆತ್ತಿ ಬಂದ ಘೋರಿಯು ರಜಪೂತರ ಯುದ್ಧ ವಿಧಿಯ ಸದುಪಯೋಗವನ್ನು ಪಡೆದುಕೊಂಡನು.

ರಜಪೂತ್ ಸೈನಿಕರು ಪ್ರತಿದಿನ ಮುಂಜಾನೆ 3ಕ್ಕೆ ಎದ್ದು ಪ್ರಾಥರ್ವಿಧಿಗಳನ್ನು ಮುಗಿಸಿ, ಸ್ನಾನ ಮಾಡಿ ಉಪಾಹಾರ ಮಾಡುತ್ತಿದ್ದರು. ಅನಂತರ ಸೂರ್ಯೋದಯಕ್ಕೆ ಮೊದಲು ತಮ್ಮ ಆಯುಧಗಳನ್ನು ತೆಗೆದುಕೊಂಡು ಮುಸ್ಲಿಂ ಸೈನಿಕರ ಎದುರು ಹೋರಾಟಕ್ಕೆ ಹೋಗುತ್ತಿದ್ದರು.

ಮಹಮ್ಮದ್ ಘೋರಿಯು ಇವರ ಆಚಾರಗಳನ್ನು ತಿಳಿದುಕೊಂಡನು. ಅವನ ಹಂಚಿಕೆಯ ಪ್ರಕಾರ ಮುಸ್ಲಿಂ ಯೋಧರು ರಜಪೂತ್ ಸೈನಿಕರು ಪ್ರಾಥರ್ವಿಧಿಗಳನ್ನು ಪೂರೈಸುವಾಗ ಅವರ ಮೇಲೆ ಆಕ್ರಮಣ ಮಾಡಿದರು. ಆ ಸಮಯದಲ್ಲಿ ರಜಪೂತ್ ಸೈನಿಕರ ಬಳಿ ಯಾವುದೇ ಆಯುಧಗಳಿರಲಿಲ್ಲ, ಅವರ ಹೊಟ್ಟೆಯಲ್ಲಿ ಆಹಾರವು ಇರಲಿಲ್ಲ. ಇನ್ನು ಮುಂದೆ ಏನಾಯಿತು ಎಂಬುದನ್ನು ತಿಳಿಯಲು ಇತಿಹಾಸ ಓದಿಲ್ಲದವರು ಹೇಳಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed