Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲ್ » ಆಕರ್ಷಣೆಗಳು » ಮಿರನ್ ಸಾಹಿಬ್‍ರವರ ಗೋರಿ

ಮಿರನ್ ಸಾಹಿಬ್‍ರವರ ಗೋರಿ, ಕರ್ನಾಲ್

1

ಮಿರನ್ ಸಾಹಿಬ್ ಎಂಬುದು ಅಸ್ತನ್ ಸಯದ್ ಮಹಮ್ಮದ್‍ರವರ ಸಂಕ್ಷಿಪ್ತ ನಾಮಧೇಯ. ಇವರು ತಮ್ಮ ಸೇವಾ ಕಾರ್ಯಗಳಿಗಾಗಿ ಮತ್ತು ಮಾನವೀಯತೆಗಾಗಿ ಜಾತಿ, ಧರ್ಮ,ಭೇದಗಳಿಲ್ಲದೆ ಭಾರೀ ಖ್ಯಾತಿಯನ್ನು ಗಳಿಸಿರುವ ಒಬ್ಬ ಸಂತರಾಗಿದ್ದಾರೆ.

ಒಂದು ದಂತಕತೆಯ ಪ್ರಕಾರ ಒಬ್ಬ ರಾಜನು ಒಂದು ಬ್ರಾಹ್ಮಣರ ಹುಡುಗಿಯನ್ನು ಅಪಹರಿಸಿದನಂತೆ. ಆಕೆಯನ್ನು ಬಿಡುಗಡೆ ಮಾಡಲು ಆತ ನಿರಾಕರಿಸಿದಾಗ, ಮಿರನ್ ಸಾಹಿಬ್‍ರವರು 500 ಜನ ಹೋರಾಟಗಾರರ ಜೊತೆಗೆ ರಾಜನ ಮೇಲೆ ಆಕ್ರಮಣ ಮಾಡಿದರಂತೆ. ಈ ಯುದ್ಧವು ಕರ್ನಾಲ್ ರೈಲು ನಿಲ್ದಾಣದ ಬಳಿ ನಡೆಯಿತು. ಕಡೆಗು ಒಂದು ಸಾಹಸಮಯ ಹೋರಾಟದಿಂದಾಗಿ ಆ ಹುಡುಗಿಯನ್ನು ಬಂಧ ಮುಕ್ತಗೊಳಿಸಲಾಯಿತಾದರು, ಹಲವಾರು ಸೈನಿಕರು ತಮ್ಮ ಪ್ರಾಣವನ್ನು ನೀಗಬೇಕಾಗಿ ಬಂದಿದ್ದು, ವಿಷಾದನೀಯ.

ಮಿರನ್ ಸಾಹಿಬ್‍ರವರು ಈ ಯುದ್ಧದಲ್ಲಿ ತಮ್ಮ ಒಂದು ಕೈಯನ್ನು ಸಹ ಕಳೆದುಕೊಂಡರು. ಆದರೆ ಈ ಕತೆಯ ಅತ್ಯಂತ ಕುತೂಹಲಕಾರಿ ಅಂಶವೆಂದರೆ, ಆ ಕೈಯನ್ನು ಪಟಿಯಾಲ ಜಿಲ್ಲೆಯ ಬುಧಾನ ಎಂಬಲ್ಲಿ ಸಮಾಧಿ ಮಾಡಲಾಗಿದೆ. ಇದಲ್ಲದೆ ಈ ಸಂತರು ಹಿಜಿರಾ ಶಕೆ 286ರಲ್ಲಿ ಮರಣ ಹೊಂದಿದಾಗ ಅವರ ಶಿರವನ್ನು ಕರ್ನಾಲ್‍ನಲ್ಲಿ ಮತ್ತು ಉಳಿದ ದೇಹವನ್ನು ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯಲ್ಲಿರುವ ಝಿಂಜಾನದಲ್ಲಿ ಸಮಾಧಿ ಮಾಡಲಾಯಿತು. ಕರ್ನಾಲ್‍ನಿಂದ ಸ್ವಲ್ಪ ದೂರಕ್ಕೆ ದಕ್ಷಿಣ ಭಾಗದಲ್ಲಿ ಅವರ ಗೋರಿಯನ್ನು ಮತ್ತು ಅದರ ಜೊತೆಗೆ ಕರ್ನಾಲ್‍ನ ಮಂಡಲ್ ನವಾಬ್ ಕುಟುಂಬ ಸದಸ್ಯರ ಗೋರಿಗಳನ್ನು ನಾವು ಕಾಣಬಹುದು. ಇದರ ಸಮೀಪದಲ್ಲಿ ಒಂದು ಮಸೀದಿಯನ್ನು ಸಹ ನಾವು ನೋಡಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu