ಗಾಲ್ಫ್ ಎಂಬ ಆಟವು ಭಾರತಕ್ಕೆ ಬ್ರಿಟೀಷರು ನೀಡಿದ ಬಳುವಳಿ. ಬ್ರಿಟೀಷರು ಗಾಲ್ಫ್ ಆಟವನ್ನು ಬಹುವಾಗಿ ಇಷ್ಟಪಡುತ್ತಿದ್ದರು. ಇವರು ಗಾಲ್ಫ್ ಆಟದ ಮೋಜನ್ನು ಅನುಭವಿಸುವ ಸಲುವಾಗಿ 1829ರಲ್ಲಿ ಭಾರತದ ಮೊಟ್ಟ ಮೊದಲ ಗಾಲ್ಫ್ ಕೋರ್ಸನ್ನು ಕಲ್ಕತ್ತಾದಲ್ಲಿ ನಿರ್ಮಿಸಿದರು. ಇದು ಬ್ರಿಟನ್‍ನ ಹೊರಗೆ ನಿರ್ಮಾಣಗೊಂಡ ಮೊಟ್ಟ ಮೊದಲ ಗಾಲ್ಫ್ ಕೋರ್ಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದನ್ನು ರಾಯಲ್ ಕಲ್ಕತ್ತಾ ಗಾಲ್ಫ್ ಕೋರ್ಸ್ ಎಂದು ಕರೆಯುತ್ತಾರೆ. ಇದು ಇಂದಿಗು ಕಾರ್ಯನಿರ್ವಹಿಸುತ್ತಿದ್ದು, ಭಾರತದ ಹಳೆಯ ಗಾಲ್ಫ್ ಕೋರ್ಸ್ ಎಂಬ ಕೀರ್ತಿಯನ್ನು ಸಂಪಾದಿಸಿದೆ. ನಂತರ ಬಾಂಬೆ, ಬೆಂಗಳೂರು, ಶಿಲ್ಲಾಂಗ್, ದೆಹಲಿ ಮತ್ತು ಇನ್ನಿತರ ಸ್ಥಳಗಳಲ್ಲಿ ಗಾಲ್ಫ್ ಕೋರ್ಸ್ ಆರಂಭವಾಯಿತು.
ನಂತರ ಅಲ್ಪಾವಧಿಯಲ್ಲಿಯೇ ಈ ಆಟವು ದೇಶದಲ್ಲಿ ಭಾರೀ ಪ್ರಸಿದ್ಧಿಯನ್ನು ಸಂಪಾದಿಸಿತು. ಅದರ ಫಲವಾಗಿ ಸಣ್ಣ ಸಣ್ಣ ನಗರಗಳಲ್ಲಿಯು ಸಹ ಗಾಲ್ಫ್ ಕೋರ್ಸ್ ಆರಂಭವಾಯಿತು. ಕೆರೆಗಳ ಪಕ್ಕ, ಟೀ ಎಸ್ಟೇಟ್‍ಗಳ ಬಳಿ, ಕಾಡುಗಳು, ಮರುಭೂಮಿಗಳು ಮತ್ತು ದಂಡು ಪ್ರದೇಶದಲ್ಲಿ ಬ್ರಿಟೀಷರು ಈ ಗಾಲ್ಫ್ ಕೋರ್ಸ್ ಗಳನ್ನು ನಿರ್ಮಾಣ ಮಾಡಿದರು.
ಕರ್ನಾಲ್‍ನ ಹವಾಮಾನವು ಗಾಲ್ಫ್ ಕೋರ್ಸ್ ಸ್ಥಾಪಿಸಲು ಅನುಕೂಲಕರವಾದ ವಾತಾವರಣವನ್ನು ಒದಗಿಸಿರುವುದರಿಂದಾಗಿ ಇಲ್ಲಿನ ಯಮುನಾ ನದಿಯ ಪಶ್ಚಿಮ ದಂಡೆಯ ನಾಲೆಯ ಪಕ್ಕದಲ್ಲಿ ಹರಿಯಾಣ ಸರ್ಕಾರವು ಒಂದು ಗಾಲ್ಫ್ ಕೋರ್ಸನ್ನು ಆರಂಭಿಸಿದೆ. ಇದು ಓಯಸಿಸ್ ಕಾಂಪ್ಲೆಕ್ಸಿಗೆ ಸಮೀಪದಲ್ಲಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿ 1 ,ಆದ ಗ್ರ್ಯಾಂಡ್ ಟ್ರಂಕ್ ರಸ್ತೆಯ ಇಕ್ಕೆಲದಲ್ಲಿ ಅಂದವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಆಟಗಾರರು ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗಲು ಸುರಂಗ ಮಾರ್ಗವನ್ನು ಒದಗಿಸಲಾಗಿದೆ.
ಕರ್ನಾಲ್ ಗಾಲ್ಫ್ ಕೋರ್ಸ್ ಅತ್ಯಂತ ನಯನ ಮನೋಹರವಾಗಿರುವ ಸ್ಥಳದಲ್ಲಿ ನೆಲೆಗೊಂಡಿದೆ. ಇದು ಕರ್ಣ ಕೆರೆ ಮತ್ತು ಒಯಸಿಸ್ ಕಾಂಪ್ಲೆಕ್ಸಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಗಾಲ್ಫ್ ಕೋರ್ಸ್ ದೇಶದ ಗಾಲ್ಫ್ ಆಟದ ಭೂಪಟದಲ್ಲಿ ಕರ್ನಾಲಿಗೆ ಸಹ ಒಂದು ಸ್ಥಾನವನ್ನು ಕಲ್ಪಿಸಿದೆ.


Click it and Unblock the Notifications