ರಾಜಸ್ಥಾನದ ಕರೌಲಿಯಲ್ಲಿರುವ ಕಲ್ಯಾಣ್ ಜಿ ದೇವಸ್ಥಾನವು, 200 ವರ್ಷಗಳಷ್ಟು ಹಿಂದೆ ಮಹಾರಾಜಾ ಗೋಪಾಲ್ ಸಿಂಗ್ ರಿಂದ ನಿರ್ಮಾಣವಾಗಿದೆ. ಕಲ್ಯಾಣ್ ಜಿ ಯ ಗೌರವಾರ್ಥವಾಗಿ ಕರೌಲಿಗೆ ಮೊದಲು ಕಲ್ಯಾಣಪುರಿ ಎಂಬ ಹೆಸರನ್ನಿಡಲಾಗಿತ್ತು. ಈ ದೇವಸ್ಥಾನದ ಮುಖ್ಯ ಹಾಲ್ ನಲ್ಲಿ ಕಲ್ಯಾಣ್ ಜಿ ಯ ವಿಗ್ರಹವಿದ್ದು ಸುತ್ತಲು ಪಾರಂಪರಿಕ ಶೈಲಿಯ ವಾಸ್ತುಶಿಲ್ಪಕಲೆಯನ್ನು ಅದ್ಭುತವಾಗಿ ರೂಪಿಸಲಾಗಿದೆ. ಜಾನಪದ ನಂಬಿಕೆಗಳ ಪ್ರಕಾರ ಈ ದೇವಸ್ಥಾನವು ಕರೌಲಿಯ ಉನ್ನತಿಗೆ ಬಲವಾದ ಮಾರ್ಗದರ್ಶಿಯಾಗಿದೆ.


Click it and Unblock the Notifications