Search
  • Follow NativePlanet
Share
ಮುಖಪುಟ » ಸ್ಥಳಗಳು » ಕರೌಲಿ » ಹವಾಮಾನ

ಕರೌಲಿ ಹವಾಮಾನ

ಸೆಪ್ಟಂಬರ್ ಮತ್ತು ಮಾರ್ಚ್ ನ ನಡುವಿನ ಅವಧಿಯು ಕರೌಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಏಕೆಂದರೆ ವಾತಾವರಣವು ಹಿತಕರವಾಗಿರುತ್ತದೆ. ಫೆಬ್ರುವರಿಯಲ್ಲಿ ನಡೆಯುವ ಪ್ರಾಣಿಗಳ ಉತ್ಸವ ಮತ್ತು ಮಾರ್ಚ್-ಎಪ್ರಿಲ್ ಮಧ್ಯದಲ್ಲಿ ಕೈಲಾ ದೇವಿ ದೇವಸ್ಥಾನದಲ್ಲಿ ಜರುಗುವ ಧಾರ್ಮಿಕ ಉತ್ಸವಗಳು ಬಹುಸಂಖ್ಯೆಯಲ್ಲಿ ಪ್ರವಾಸಿಗರನ್ನು ಕರೌಲಿಗೆ ಆಕರ್ಷಿಸುತ್ತವೆ.

ಬೇಸಿಗೆಗಾಲ

(ಎಪ್ರಿಲ್ ನಿಂದ ಮೇ): ಬೇಸಿಗೆಗಾಲದಲ್ಲಿ ಸಾಮಾನ್ಯವಾಗಿ ಗರಿಷ್ಟ ತಾಪಮಾನವು 47° C ಯಾಗಿದ್ದು ಕನಿಷ್ಟ ತಾಪಮಾನವು 30° C ಇರುತ್ತದೆ. ಮೇ ಯು ವರ್ಷದ ಉಷ್ಣಮಯ ತಿಂಗಳಾಗಿರುತ್ತದೆ. ಈ ಸಮಯದಲ್ಲಿ ಪ್ರವಾಸಿಗರು ಇಲ್ಲಿಗೆ ಹೋಗದಿರುವುದೆ ಉತ್ತಮ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್): ಜೂನ್ ಗೆ ಪ್ರಾರಂಭವಾಗುವ ಮಳೆಗಾಲ ಸೆಪ್ಟಂಬರ್ ಗೆ ಕೊನೆಗೊಳ್ಳುತ್ತದೆ. ಮಧ್ಯಮ ಪ್ರಮಾಣದ ಮಳೆಯನ್ನು ಈ ಸಮಯದಲ್ಲಿ ಕರೌಲಿ ಪಡೆಯುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರುವರಿ): ಚಳಿಗಾಲದಲ್ಲಿ ಸಾಮಾನ್ಯವಾಗಿ ಗರಿಷ್ಟ ತಾಪಮಾನವು 28° C ಯಾಗಿದ್ದು ಕನಿಷ್ಟ ತಾಪಮಾನವು 8° C ಇರುತ್ತದೆ. ಕೆಲವೊಮ್ಮೆ ಕನಿಷ್ಟ ತಾಪಮಾನವು 4° C ಗೂ ತಲುಪುವುದುಂಟು. ಈ ಸಮಯದಲ್ಲಿ ವಾತಾವರಣವು ಹಿತಕರವಾಗಿರುತ್ತದೆ.