ಮಾ ಅಂಬಿಕಾ ದೇವಸ್ಥಾನ ಉತ್ತರ ಒಡಿಸ್ಸಾದಲ್ಲಿರುವ ಪ್ರಸಿದ್ಧ ದೇವಸ್ಥಾನ. ಇದು ದುರ್ಗಾ ದೇವಿಗೆ ಸಂಬಂಧಿಸಿದ ಮಾ ಅಂಬಿಕಾ ದೇವಸ್ಥಾನವಾಗಿದೆ. ದೇವಸ್ಥಾನದಲ್ಲಿ ಇತರ ದೇವತೆಗಳ ಮೂರ್ತಿಗಳೂ ಇವೆ. 1940ರಲ್ಲಿ ಮಯುರಭಂಜ್ ರಾಜ್ಯಾಡಳಿತ ವೇಳೆ ಈ ದೇವಸ್ಥಾನವನ್ನು ನಿರ್ಮಿಸಲಾಗಿತ್ತು.
ಮಂದಿರ ದಟ್ಟ ಹಸಿರು ಕಾಡುಗಳು ಮತ್ತು ಬೆಟ್ಟಗಳ ನಡುವೆ ಇದೆ. ಇಲ್ಲಿನ ಪ್ರಶಾಂತ ಪ್ರದೇಶವು ಕುಳಿತುಕೊಂಡು ಧ್ಯಾನ ಮಾಡುವ ಭಕ್ತರ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಮಂದಿರದ ಸುತ್ತಮುತ್ತ ವಿಭಿನ್ನ ರೀತಿಯ ಚಿಟ್ಟೆ ಮತ್ತು ಪಕ್ಷಿಗಳನ್ನು ಕಾಣಬಹುದಾಗಿದೆ.
ಸುತ್ತಲಿನ ನೈಸರ್ಗಿಕ ಸೌಂದರ್ಯದಿಂದ ಇದೊಂದು ಪಿಕ್ನಿಕ್ ಗೆ ಯೋಗ್ಯ ಸ್ಥಳವೆನಿಸಿದೆ. ಮಂದಿರದ ಪಾವಿತ್ರ್ಯತೆ ದೃಷ್ಟಿಯಿಂದ ಬೆಟ್ಟದ ಕೆಳಗಡೆ ಮಾತ್ರ ಪಿಕ್ನಿಕ್ ಗೆ ಅವಕಾಶ ನೀಡಲಾಗುತ್ತಿದೆ.


Click it and Unblock the Notifications