Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರಂಜಿಯಾ » ಹವಾಮಾನ

ಕಾರಂಜಿಯಾ ಹವಾಮಾನ

ಚಳಿಗಾಲವು ನಿಸ್ಸಂಶಯವಾಗಿಯೂ ಅತ್ಯುತ್ತಮ ಋತು. ಅಕ್ಟೋಬರ್ ಮತ್ತು ಮಾರ್ಚ್ ಮಧ್ಯೆ ಇಲ್ಲಿಗೆ ಭೇಟಿ ನೀಡಲು ಯೋಗ್ಯ. ಈ ಸಮಯದಲ್ಲಿ ಹಲವಾರು ಹಬ್ಬಗಳು ಮತ್ತು ಉತ್ಸವಗಳು ನಡೆಯುವುದರಿಂದ ಪ್ರವಾಸಿಗಳಿಗೆ ಇದು ಹೆಚ್ಚಿನ ಲಾಭ. ಪ್ರವಾಸಿಗಳು ಬೆಚ್ಚಗಿನ ಬಟ್ಟೆಗಳನ್ನು ಕೊಂಡೊಯ್ಯಲು ಸಲಹೆ ಮಾಡಲಾಗುತ್ತದೆ.

ಬೇಸಿಗೆಗಾಲ

ಮಾರ್ಚ್ ನಿಂದ ಜೂನ್ ತನಕ ಇರುವ ಬೇಸಿಗೆ ಕಾಲವು ತುಂಬಾ ಉಷ್ಣತೆಯಿಂದ ಕೂಡಿರುತ್ತದೆ. ಮೇ ತಿಂಗಳು ತುಂಬಾ ಸೆಕೆಯ ತಿಂಗಳಾಗಿರುತ್ತದೆ. ಬೇಸಿಗೆ ಕಾಲದಲ್ಲಿ ಕನಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ಉಷ್ಣಾಂಶ 40 ಡಿಗ್ರಿಗಿಂತ ಹೆಚ್ಚಿರುತ್ತದೆ. ದಿನದಲ್ಲಿ ಶಾಖದ ಅಲೆಗಳು ಬೀಸುವುದರಿಂದ ಜೀವನ ದುಸ್ತರವಾಗುತ್ತದೆ. ಈ ಸಮಯದಲ್ಲಿ ಭೇಟಿ ನೀಡುವುದು ಯೋಗ್ಯವಲ್ಲ.

ಮಳೆಗಾಲ

ಕಾರಂಜಿಯಾದಲ್ಲಿ ಸಾಧಾರಣ ಮಳೆ ಅನುಭವಕ್ಕೆ ಬರುತ್ತದೆ. ಜುಲೈನಿಂದ ಸಪ್ಟೆಂಬರ್ ತನಕ ಮಳೆಗಾಲವಿರುತ್ತದೆ. ಮಳೆಗಾಲವು ಸ್ಥಳೀಯರಿಗೆ ಬೇಸಿಗೆ ಬೇಗೆಯಿಂದ ಸ್ವಲ್ಪ ಸಮಾಧಾನ ನೀಡುತ್ತದೆ. ತನ್ನ ಎತ್ತರದ ಕಾರಣದಿಂದಾಗಿ ಕಾರಂಜಿಯಾದಲ್ಲಿ ಮಳೆಗಾಲದ ವೇಳೆ ಆಗಾಗ್ಗೆ ಅಂತರದಲ್ಲಿ ಸುರಿಮಳೆಯಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಕಾರಣ ಈ ಸಮಯದಲ್ಲಿ ಪ್ರಯಾಣ ಮಾಡುವುದು ದೊಡ್ಡ ಸಮಸ್ಯೆಯಾಗಬಹುದು.

ಚಳಿಗಾಲ

ತಾಪಮಾನ 10 ಡಿಗ್ರಿ ಸೆಲ್ಸಿಯಸ್ ನಷ್ಟು ಕುಸಿಯುವ ಕಾರಣದಿಂದಾಗಿ ಚಳಿಗಾಲವು ತುಂಬಾ ತಂಪಾಗಿರುತ್ತದೆ. ಅಕ್ಟೋಬರ್ ನಲ್ಲಿ ಆರಂಭವಾಗುವ ಚಳಿಗಾಲವು ಫೆಬ್ರವರಿಯಲ್ಲಿ ಕೊನೆಗೊಳ್ಳುತ್ತದೆ. ದಿನವು ತಂಪಾಗಿದ್ದರೆ ರಾತ್ರಿ ತುಂಬಾ ಚಳಿಯಿರುತ್ತದೆ.