Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಪಾಳಾಸಿ ಡ್ಯಾಮ್

ಪಾಳಾಸಿ ಡ್ಯಾಮ್, ಕಣ್ಣೂರು

3

ಕಣ್ಣರೂನಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಪಾಳಾಸಿ ಜಲಾಶಯ ಬಹಳ ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಜಲಾಶಯ ತನ್ನ ಸೌಂದರ್ಯ ಹಾಗೂ ಇಲ್ಲಿನ ಮನರಂಜನೀಯ ಅನುಕೂಲತೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಾಲಪಟ್ಟನಂ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಜಲಾಶಯ ಕಣ್ಣೂರಿಗೆ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಉಪಯುಕ್ತವಾಗಿದೆ.

ಬ್ರಿಟೀಷರ ವಿರುದ್ಧ ಹೋರಾಡಿದ ಹಾಗೂ ಕೇರಳದ ಇತಿಹಾಸದಲ್ಲೇ ವಿಶೇಷ ಸ್ಥಾನ ಪಡೆದಿರುವ ಧೀಮಂತ ಧೀರ ಮಹಾರಾಜ ಪಾಳಾಸಿ ರಾಜ ಅವರ ಹೆಸರನ್ನೇ ಈ ಜಲಾಶಕ್ಕೆ ಇಡಲಾಗಿದೆ. ಇವರ ಜನ್ಮಸ್ಥಳ ಜಲಾಶಯದಿಂದ 11 ಕಿ.ಮೀ. ದೂರದಲ್ಲಿದ್ದು ಅದು ಪ್ರವಾಸಿಗರ ವಿಶೇಷ ತಾಣವಾಗಿದೆ.

ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಕಣ್ಣೂರು ಜಿಲ್ಲೆಯ ಟೂರಿಸ್ಟ್ ಪ್ರಮೋಶನ ಕೌನ್ಸಿಲ್ ಆರ್ಗನೈಸೇಷನ್ ಜಲಾಶಯದಲ್ಲಿ ಬೋಟಿಂಗ್ ಸೌಕರ್ಯವನ್ನು ಏರ್ಪಡಿಸಿದೆ. ಜಲಾಶಯದಲ್ಲಿ ಸುಂದರವಾದ ಉದ್ಯಾನ ನಿರ್ಮಿಸಲಾಗಿದ್ದು ಇಲ್ಲಿ ಪ್ರವಾಸಿಗರಿಗೆ ಉತ್ತಮ ಮನರಂಜನೆಯನ್ನು ಹಮ್ಮಿಕೊಳ್ಳಲಾಗಿದೆ. ಜಲಾಶಯದ ಸಮೀಪದಲ್ಲಿ ಬೆಟ್ಟದ ಮೇಲಿರುವ ಪಾಳಾಸಿ ರಾಜ ಹಾಗೂ ಬುದ್ಧನ ಪ್ರತಿಮೆಗಳು ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಶಾಲಾ ಪ್ರವಾಸ, ಕುಟುಂಬದವರೊಂದಿಗೆ ಪಿಕ್ ನಿಕ್ ಹಾಗೂ ಒಂದು ದಿನದ ಪ್ರವಾಸಕ್ಕೆ ಪಾಳಾಸಿ ರಾಜ ಡ್ಯಾಮ್ ಹೇಳಿ ಮಾಡಿಸಿದ ಸ್ಥಳ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed