Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಮುಳುಪಿಳಂಗಡ್ ಬೀಚ್

ಮುಳುಪಿಳಂಗಡ್ ಬೀಚ್, ಕಣ್ಣೂರು

1

ಇಡೀ ಏಪ್ಯಾ ಖಂಡದಲ್ಲೇ ಏಕೈಕ ಡೈವ್ ಇನ್ ಬೀಚ್ ಎಂಬ ಹೆಗ್ಗಳಿಕೆ ಭಾರತದ ಮುಳುಪಿಳಂಗಡ್ ಬೀಚ್ ಗೆ ಇದೆ. ತಲಚೇರಿಯಿಂದ 8 ಕಿ.ಮೀ. ಹಾಗೂ ಕಣ್ಣೂರು ನಗರದಿಂದ 16 ಕಿ.ಮೀ. ದೂರದಲ್ಲಿ ಇದು ನಲೆಸಿದೆ. ತಲಚೇರಿ ಹಾಗೂ ಕಣ್ನೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 17ರ ರಸ್ತೆ ಮಾರ್ಗವಾಗಿ ಪ್ರತೀ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ ಅಲ್ಲದೆ ಕುಟುಂಬದವರೆಲ್ಲರೂ ಒಂದು ದಿನ ಜಾಲಿಯಾಗಿ ಕಳೆಯಲು ಇದು ಬಹಳ ಉತ್ತಮವಾದ ಸ್ಥಳವಾಗಿದೆ.

ಸಮುದ್ರ ತೀರದಲ್ಲಿ ರಸ್ತೆ ಮಾರ್ಗವಾಗಿ ಸುಮಾರು 5 ಕಿ.ಮೀ.ವರೆಗೂ ತಮ್ಮ ವಾಹನದಲ್ಲೇ ಪ್ರಯಾಣಿಸುತ್ತಾ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬಹುದು. ಏಪ್ರಿಲ್ ತಿಂಗಳಲ್ಲಿ ನಡೆಯುವ ಬೀಚ್  ಉತ್ಸವದಲ್ಲಿ ಸಾಹಸ ಪ್ರೇಮಿಗಳು ಹಾಗೂ ಯುವಕ ಯುವತಿಯರನ್ನೇ ಇಲ್ಲಿ ಹೆಚ್ಚಾಗಿ ನೋಡಬಹುದಾಗಿದೆ. ಈ ಬೀಚ್ ಗೆ ಸುಮಾರು 200 ಮೀಟರ್ ದಕ್ಷಿಣಕ್ಕಿರುವ ಧರ್ಮಾದಮ್ ದ್ವೀಪವನ್ನು ಪಚ್ಚ ತುರುತ್ತು ಎಂದೂ ಕರೆಯುತ್ತಾರೆ.

ಪ್ರವಾಸಿಗರು ಕಾರು ಅಥವಾ ಮೋಟಾರ್ ಬೈಕ್ ಗಳ ಮೂಲಕ ಇಡೀ ಮುಳುಪಿಳಂಗಡ್ ಬೀಚನ್ನು ಸುತ್ತಾಡುತ್ತಾ ಪ್ರಕೃತಿ ಸೌಂದರ್ಯವನ್ನು ಕಣ್ ತುಂಬಿಕೊಳ್ಳಬಹುದು. ಸುಮುದ್ರ ತೀರದಲ್ಲಿ ತಲೆ ಎತ್ತಿ ನಿಂತಿರುವ ವಿಚಿತ್ರ ಆಕಾರದ ದೊಡ್ಡ ದೊಡ್ಡ ಬಂಡೆಗಳು ಹಾಗೂ ಸುಂದರ ಯುವತಿಯಂತೆ ಬಳುಕುತ್ತಾ ನಲಿಯುವ ತೆಂಗಿನ ಮರಗಳು ಸಮುದ್ರ ತೀರಕ್ಕೆ ಮತ್ತಷ್ಟು ಅಂದವನ್ನು ತರುತ್ತದೆ. ಮಳೆಗಾಲ ಬಿಟ್ಟರೆ ಈ ಸಮುದ್ರ ತೀರಕ್ಕೆ ನೀವು ಯಾವಾಗ ಬೇಕಾದರೂ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed