Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಮೋಪಿಲ್ಲಾ ಬೇ

ಮೋಪಿಲ್ಲಾ ಬೇ, ಕಣ್ಣೂರು

1

ಕಣ್ಣೂರಿನಿಂದ ಕೆಲವೇ ಕಿ.ಮೀ.ಗಳ ದೂರದ ಆಯಿಕಾರ ಗ್ರಾಮದಲ್ಲಿ ಮೋಪಿಲ್ಲಾ ಬೇ ಅಥವಾ ಮಾಪಿಲ್ಲಾ ಬೇ ಇದೆ. ಮೋಪಿಲ್ಲಾ ಸಮುದ್ರ ತೀರದ ಒಂದು ಭಾಗದಲ್ಲಿ ಸೇಂಟ್ ಏಂಜಲೋ ಫೋರ್ಟ್ ಇದ್ದು ಮತ್ತೊಂದೆಡೆ ಅರಕಾಲ್ ಅರಮನೆ ಇರುವುದಲ್ಲದೆ ಇಲ್ಲಿ ನೈಸರ್ಗಿಕ ಬಂದರು ಇರುವುದರಿಂದ ಇದೊಂದು ಸುಂದರ ಹಾಗೂ ಮನಮೋಹಕ ಪ್ರದೇಶವಾಗಿ ಗೋಚರಿಸುತ್ತದೆ.

ಕೊಲಾತಿರಿ ಸಂಸ್ಥಾನದ ಗತಕಾಲದ ವೈಭವವನ್ನು ಈಗಲೂ ತಿಳಿಸುವ ಐತಿಹಾಸಿಕ ಹಿನ್ನೆಲೆಯನ್ನು ಈ ಸಮುದ್ರ ತೀರ ಹೊಂದಿದೆ. ಕೊಲಾತುನ್ನಾಡುವಿನ ಈ ಪ್ರದೇಶ ವಾಣಿಜ್ಯ ಕೇಂದ್ರವಾಗಿದ್ದು ನೆರೆ ರಾಷ್ಟ್ರಗಳೊಂದಿಗೂ ವ್ಯಾಪಾರ ವಹಿವಾಟು ನಡೆಸುತ್ತಿತ್ತು. ಇಲ್ಲಿನ ಸೇಂಟ್ ಏಂಜಲೋ ಫೋರ್ಟ್ ಹಾಗೂ ಅರಕಾಲ್ ಅರಮನೆ ಮತ್ತು ಸಮುದ್ರ ತೀರದಲ್ಲಿ ಸುತ್ತಾಡುವುದು ಪ್ರವಾಸಿಗರಿಗೆ ಹಿತವಾದ ಅನುಭವ ನೀಡುತ್ತದೆ.

ಸಮುದ್ರದ ಒಳಗೇ ಇಳಿಬಿಟ್ಟಂತಿರುವ ಕೋಟೆಯ ದೊಡ್ಡ ಗೋಡೆಯು ಸಮುದ್ರ ನೀರನ್ನು ಭೂಮಿಯಿಂದ ಬೇರ್ಪಡಿಸುವುದರಿಂದ ದೋಣಿಗಳು ಇಲ್ಲಿ ಲಂಗರು ಹಾಕಿ ನಿಲ್ಲಬಹುದಾಗಿದೆ. ಪ್ರವಾಸಿಗರು ಇಲ್ಲಿ ದೋಣಿ ವಿಹಾರ ಮಾಡಲು ಅನುಕೂಲವಾಗಿದೆ, ಆದರೆ ದೋಣಿ ವಿಹಾರಕ್ಕೆ ಹೊರಡುವ ಮುನ್ನ ಹವಾಮಾನವನ್ನು ಒಮ್ಮೆ ಪರೀಕ್ಷಿಸಿಕೊಳ್ಳಲೇ ಬೇಕಾಗಿರುವುದು ಮುಖ್ಯ. ಇತ್ತೀಚೆಗೆ ಇಂಡೋ-ನಾರ್ವೇಜಿಯನ್ ಯೋಜನೆಯಡಿ ಈ ಪ್ರದೇಶವನ್ನು ಸ್ಥಳೀಯ ಮೀನುಗಾರಿಕೆಗಾಗಿ ದುರಸ್ತಿ ಮಾಡಲಾಗಿದ್ದು ಪ್ರವಾಸಿಗರಿಂದಲೂ ಮೆಚ್ಚುಗೆ ಗಳಿಸಿ ಜನಪ್ರಿಯತೆಯನ್ನು ಹೊಂದಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue