ಕಣ್ಣೂರಿನಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ಸೆಂಟ್ ಏಂಜಲೋ ಫೋರ್ಟ್ ಅನ್ನು ಸ್ಥಳಿಯರು ಕಣ್ಣೂರು ಕೋಟೆ ಅಥವಾ ಕಣ್ಣೂರು ಫೋರ್ಟ್ ಎಂದು ಕರೆಯುತ್ತಾರೆ. ಅರಬ್ಬಿ ಸಮುದ್ರಕ್ಕೆ ಮುಖ ಮಾಡಿಕೊಂಡಿರುವ ಈ ಕೋಟೆಯು ಹಚ್ಚ ಹಸಿರನ್ನೇ ಮೈಗೆ ಹೊದ್ದುಕೊಂಡು ಸುಂದರವಾಗಿ ಕಾಣುತ್ತದೆ.
1505 ರಲ್ಲಿ ಭಾರತದ ಮೊದಲ ಪೋರ್ಚುಗೀಸ್ ವೈಸ್ ರಾಯ್ ಆಗಿದ್ದ ಡಾಮ್ ಫ್ರಾನ್ಸಿಸ್ಕೋ ಡಿ ಆಲ್ಮೇಡ್ ಎಂಬುವರು ಈ ಕೋಟೆಯನ್ನು ನಿರ್ಮಿಸಿದ ಇತಿಹಾಸವಿದೆ. ಈ ಪ್ರದೇಶದ ಮೇಲೆ ದಾಳಿ ಮಾಡಲು ಬರುತ್ತಿದ್ದ ಶತ್ರುಗಳನ್ನು ತಡೆಯುವಲ್ಲಿ ಈ ಕೋಟೆ ಬಲಶಾಲಿಯಾಗಿದ್ದು ಅತ್ಯಂತ ಯಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ಭಾರತದಲ್ಲಿ ಡಚ್ಚರು ಹಾಗೂ ಬ್ರಿಟೀಷರು ಆಡಳಿತ ನಡೆಸಿದ ಸಂದರ್ಭದಲ್ಲಿ, ಈ ಕೋಟೆಯಲ್ಲಿ ತಮ್ಮ ಆಡಳಿತ ಕಛೇರಿಯನ್ನು ಹೊಂದಿದ್ದರು ಹಾಗೂ ಭಾರತಕ್ಕೆ ಸ್ವಾತಂತ್ರ್ಯ ನೀಡುವವರೆಗೂ ಕಛೇರಿಯನ್ನು ಇಲ್ಲಿಯೇ ಮುಂದುವರೆಸಿದ್ದರಿಂದ ಕೋಟೆಯನ್ನು ದುರಸ್ಥಿ ಮಾಡಿದ್ದರು.
ಇಂದು ಕಣ್ಣೂರು ಕೋಟೆಯನ್ನು ಸಂರಕ್ಷಿಸಲ್ಪಟ್ಟ ಕೋಟೆ ಎಂಬುದಾಗಿ ಗುರುತಿಸಿ ಅದನ್ನು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಇಲಾಖೆಗೆ ಆಡಳಿತ ನಿರ್ವಹಣೆಗೆ ನೀಡಲಾಗಿದೆ. ಈ ಪ್ರದೇಶದ ಇತಿಹಾಸಕ್ಕೆ ಒಂದು ರೂಪವನ್ನು ನೀಡಿದ ಈ ಪಾರಂಪರಿಕ ಬೆಟ್ಟವು ಪ್ರತೀ ವರ್ಷ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.
ವಾರದ ಎಲ್ಲಾ ದಿನವೂ ಇಲ್ಲಿಗೆ ಪ್ರವೇಶ ಉಂಟು
ಸಮಯ : ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ
ಪ್ರವೇಶ ಶುಲ್ಕ : ಇರುವುದಿಲ್ಲ.


Click it and Unblock the Notifications