ಸಿದ್ಧನಾಥ ದೇವಾಲಯವು ಕಂಗ್ರಾ ಜಿಲ್ಲೆಯ ಬೈಜನಾಥ್‍ನಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದು 1758 ರಲ್ಲಿ ಕಂಗ್ರಾದ ರಾಜ ಅಭಯ ಚಂದ್‍ರಿಂದ ನಿರ್ಮಾಣಗೊಂಡಿತು. ಶಿವನಿಗಾಗಿ ನಿರ್ಮಾಣಗೊಂಡಿರುವ ಈ ದೇವಾಲಯವು ಸಮೀಪದಲ್ಲಿರುವ ಮಹಾದೇವ ದೇವಾಲಯದ ವಾಸ್ತುಶೈಲಿಯನ್ನೆ ಹೋಲುತ್ತದೆ. ದಂತಕತೆಗಳ ಪ್ರಕಾರ, ಈ ಎರಡು ದೇವಾಲಯಗಳನ್ನು ಬನಿಯ ಸಮುದಾಯದ ಇಬ್ಬರು ಸೋದರರಾದ ಬೈಜನಾಥ್ ಮತ್ತು ಸಿದ್ಧನಾಥರವರಿಗೆ ಸಮರ್ಪಿಸಲಾಗಿದೆಯೆಂದು ಭಾವಿಸಲಾಗಿದೆ.


Click it and Unblock the Notifications