ಜ್ವಾಲಾಮುಖಿ ದೇವಸ್ಥಾನ, ಕಂಗ್ರಾ

ಮುಖಪುಟ » ಸ್ಥಳಗಳು » ಕಂಗ್ರಾ » ಆಕರ್ಷಣೆಗಳು » ಜ್ವಾಲಾಮುಖಿ ದೇವಸ್ಥಾನ

ಜ್ವಾಲಾಜಿ ಎಂಬ ಹೆಸರಿನಿಂದ ಕರೆಯಲ್ಪಡುವ ಜ್ವಾಲಾಮುಖಿ ದೇವಸ್ಥಾನ ದಕ್ಷಿಣ ಕಂಗ್ರ ಕಣಿವೆಯಿಂದ 30 ಕಿಲೋ ಮೀಟರ್ ದೂರದಲ್ಲಿದೆ. ಧಗಧಗಿಸುವ ನಾಲಿಗೆಗಳನ್ನು ಹೊಂದಿರುವ ಜ್ವಾಲಾಮುಖಿ ದೇವತೆಗೆ ಈ ದೇವಸ್ಥಾನ ಅರ್ಪಿತವಾಗಿದೆ. ನೈಸರ್ಗಿಕ ಅನಿಲ ಹೊರಬರುವ ತಾಮ್ರದ ಕೊಳವೆಗಳು ಇಲ್ಲಿನ ಮತ್ತೊಂದು ಆಕರ್ಷಣೆ. ಇದೇ ಆವರಣದಲ್ಲಿ ಇನ್ನೂ 9 ಇದೇ ರೀತಿಯ ಬೆಂಕಿ ಕೊಳವೆಗಳಿದ್ದು ಇವುಗಳಿಗೆ ಹಿಂದೂ ದೇವತೆಗಳಾದ ಮಹಾಕಾಳಿ, ಅನ್ನಪೂರ್ಣ, ಚಂಡಿ, ಹಿಂಗ್ಲಜ್, ಬಿಂಧ್ಯಾ ಬಸನಿ, ಮಹಾ ಲಕ್ಷ್ಮಿ, ಸರಸ್ವತಿ, ಅಂಬಿಕಾ ಮತ್ತು ಅಂಜಿ ದೇವಿಯರ ಹೆಸರಿಡಲಾಗಿದೆ.

ಜಾನಪದ ಕಥೆಗಳ ಪ್ರಕಾರ, ಇದು ವಿವಾಹಿತರನ್ನು ಸಂತುಷ್ಟಿಗೊಳಿಸುವ ಮತ್ತು ದೀರ್ಘಾಯುಷ್ಯ ನೀಡುವ ದೇವತೆಯಾದ ಸತಿಯ ನಾಲಿಗೆ ಬಿದ್ದ ಸ್ಥಳವಾಗಿದೆ. ಚಿಕ್ಕ ಚಿಕ್ಕ ಜ್ವಾಲೆಗಳ ರೂಪದಲ್ಲಿ ಇನ್ನೂ ಈ ದೇವಿಯು ವಾಸವಿದ್ದಾಳೆ ಎಂದು ನಂಬಲಾಗುತ್ತದೆ. ದೇವಸ್ಥಾನದಲ್ಲಿರುವ ಕಲ್ಲು ಬಂಡೆಗಳ ಬಿರುಕಿನಿಂದ ನೀಲಿ ಬಣ್ಣದ ಬೆಂಕಿ ಹೊರಬರುತ್ತದೆ. ಈ ಬೆಂಕಿಯ ನೈಜತೆಯನ್ನು ತಿಳಿಯಲು ಒಂದೊಮ್ಮೆ ಸ್ವತಃ ಮೊಘಲ್ ದೊರೆ ಇಲ್ಲಿಗೆ ಭೇಟಿ ನೀಡಿದ್ದನಂತೆ. ಈ ಅಚ್ಚರಿಯನ್ನು ಕಣ್ಣಾರೆ ಕಂಡ ತಕ್ಷಣ ಆತ ದೇವತೆಯ ಪರಮ ಭಕ್ತನಾಗಿ ದೇವಸ್ಥಾನದ ಆವರಣದಲ್ಲಿ ಜ್ವಾಲೆಗಳನ್ನು ಉಪಶಮನಗೊಳಿಸಲು ನೀರು ಚುಮುಕಿಸುವ ವ್ಯವಸ್ಥೆ ಮಾಡಿದ್ದಲ್ಲದೆ ಬಂಗಾರದ ಕೊಡೆಯನ್ನೂ ಸಹ ಕಾಣಿಕೆಯಾಗಿ ನೀಡುತ್ತಾನೆ.

Please Wait while comments are loading...