ಬಾಬಾ ಬಾರೋಹ್ ದೇವಾಲಯವು ಧರ್ಮಶಾಲದಿಂದ 52 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ಆಕರ್ಶಣೆಯಾಗಿದೆ. ಇದು ಕೃಷ್ಣ ಮತ್ತು ರಾಧೆಯರಿಗಾಗಿ ಸಮರ್ಪಿಸಲಾದ ದೇವಾಲಯವಾಗಿದೆ. ಈ ಕಾರಣದಿಂದಾಗಿ ಇಲ್ಲಿಗೆ ಪ್ರತಿದಿನ ಹಲವಾರು ಯಾತ್ರಾರ್ಥಿಗಳು ಆಗಮಿಸುತ್ತಿರುತ್ತಾರೆ. ಹಿಮಾಚಲ್ ಪ್ರದೇಶದಲ್ಲಿರುವ ದೇವಾಲಯಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಬಿಳಿಯ ಅಮೃತ ಶಿಲೆಯಿಂದ ನಿರ್ಮಾಣಗೊಂಡಿರುವ ದೇವಾಲಯ ಎಂಬ ಕೀರ್ತಿಗೆ ಈ ದೇವಾಲಯವು ಪಾತ್ರವಾಗಿದೆ. ಇದನ್ನು ನಿರ್ಮಿಸಿದವರು ಸ್ಥಳೀಯರೆ ಆದ ಬಿ. ಆರ್. ಶರ್ಮಾರವರು. ಈ ದೇವಾಲಯದ ಒಳಗೆ ಇರುವ ದುರ್ಗಾದೇವಿಯ ಮೂರ್ತಿಯನ್ನು ಲೋಹದಿಂದ ನಿರ್ಮಿಸಲಾಗಿದೆ. ಬಾಬಾ ಬಾರೋಹ್ ದೇವಾಲಯಕ್ಕೆ ಸಮೀಪದಲ್ಲಿ ಕಲಿನಾಥ್ ಭೋಸ್ಲೆ ಶಂಕರ್ ಎಂಬ ಪುರಾತನವಾದ ದೇವಾಲಯವಿದೆ.