Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಂಚೀಪುರಂ » ಆಕರ್ಷಣೆಗಳು » ವರದರಾಜ ಪೆರುಮಾಳ್ ದೇವಾಲಯ

ವರದರಾಜ ಪೆರುಮಾಳ್ ದೇವಾಲಯ, ಕಾಂಚೀಪುರಂ

6

ವರದರಾಜ ಪೆರುಮಾಳ್ ದೇವಾಲಯವು ಹಸ್ತಗಿರಿ ದೇವಾಲಯ ಅಥವಾ ಅತ್ತಿಯೂರನ್ ಎಂದೂ ಹೆಸರಾಗಿದೆ. ಇದು ವಿಷ್ಣುವಿಗಾಗಿ ಕಟ್ಟಿದ ದೇವಾಲಯವಾಗಿದ್ದು ಆಳ್ವಾರ್ ಗಳು ( ಹನ್ನೆರಡು ಸಂತರು)  ಸಂದರ್ಶಿಸಿದ  108 ದೇವಾಲಯಗಳಲ್ಲಿ ಒಂದಾಗಿದೆ. ಉಳಿದ  ವಿಷ್ಣುದೇವಾಲಯಗಳ ಹಾಗೆ ಇದು ಕೂಡ ಕಾಂಚೀಪುರಂನ ವಿಷ್ಣುಕಾಂಚಿ ಭಾಗದಲ್ಲಿದೆ. ದಂತಕತೆಗಳ ಪ್ರಕಾರ ರಾಮಾನುಜರು ತಮ್ಮ ಬದುಕಿನ ಕೆಲವುಕಾಲ ಇಲ್ಲಿ ವಾಸವಾಗಿದ್ದರು. ಸ್ಥಳೀಯರು  ಏಕಾಂಬರೇಶ್ವರ ಮತ್ತು ಕಾಮಾಕ್ಷಿ ಅಮ್ಮನ್  ದೇವಾಲಯಗಳ ಜತೆಗೆ   ಈ ದೇವಾಲಯವನ್ನು  ಸೇರಿಸಿ  "ಮುಮೂರ್ತಿವಾಸಂ" ಅಂದರೆ ಮೂವರ ವಾಸಸ್ಥಳ ಎಂದು ಕರೆಯುತ್ತಾರೆ.  ಈ ದೇವಾಲಯವನ್ನು ಪೆರುಮಾಳ್ ಕೋಯಿಲ್ ಎಂದೂ ಕರೆಯುತ್ತಾರೆ. ವಿಷ್ಣುಭಕ್ತರು ತಪ್ಪದೇ ಭೇಟಿಕೊಡಬೇಕಾದ ದೇವಸ್ಥಾನ ಎಂದು ಪರಿಗಣಿಸಲಾಗಿದೆ

ಇಲ್ಲಿ  ಪ್ರತಿವರ್ಷ ನಡೆಯುವ ಉತ್ಸವದಿಂದಾಗಿ ಸ್ಥಳೀಯರಲ್ಲೂ ವಿದೇಶಿಪ್ರವಾಸಿಗಳಲ್ಲೂ ತುಂಬ ಪ್ರಸಿದ್ಧವಾಗಿದೆ. ಉತ್ಸವದಲ್ಲಿ  ಸಂಭ್ರಮಾಚರಣೆಗಳ ಆರಂಭವನ್ನು ಸೂಚಿಸುವ ಬೃಹದ್ ಗಾತ್ರದ ಕೊಡೆಗಳನ್ನು ನೋಡಬಹುದು. ಇನ್ನೊಂದು ಮಹತ್ವದ ಉತ್ಸವವಾದ 'ಬ್ರಹ್ಮೋತ್ಸವ'ವು   ಮೇ-ಜೂನ್ ಅವಧಿಯಲ್ಲಿ ಜರುಗುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu