Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಂಚೀಪುರಂ » ಹವಾಮಾನ

ಕಾಂಚೀಪುರಂ ಹವಾಮಾನ

ಕಾಂಚೀಪುರಂಗೆ ಭೇಟಿ ನೀಡಲು ಅಕ್ಟೋಬರ್ ಮತ್ತು ಫೆಬ್ರುವರಿ ನಡುವಿನ ಸಮಯವು ಉತ್ತಮ. ಅಕ್ಟೋಬರ್ ನಲ್ಲಿ ಭಾರೀ ಮಳೆಯ ನಂತರ ಶರತ್ಕಾಲವು ಆರಂಭವಾಗುತ್ತದೆ. ಹವೆಯು ಬಹುತೇಕ ತಂಪಾಗಿಯೂ ಹಿತಕರವಾಗಿಯೂ ಇರುತ್ತದೆ. ನವೆಂಬರ್ ನಲ್ಲಿ ಚಳಿಗಾಲವು ಆರಂಭವಾಗುವುದರೋಂದಿಗೆ  ರಾತ್ರಿಗಳು ತಂಪಾಗುವುವಾದರೂ ನಡುಕ ಹುಟ್ಟಿಸುವಂತೇನೂ ಖಂಡಿತವಾಗಿ ಇರುವುದಿಲ್ಲ. ಆದ್ದರಿಂದ ಅಕ್ಟೋಬರ್ ನಿಂದ ಫೆಬ್ರುವರಿ ತಿಂಗಳುಗಳು ಕಾಂಚೀಪುರಂನಲ್ಲಿನ ಸ್ಥಳಗಳ ವೀಕ್ಷಣೆಗೆ ಆದರ್ಶಸಮಯವಾಗಿದೆ.

ಬೇಸಿಗೆಗಾಲ

ಕಾಂಚೀಪುರಂನಲ್ಲಿ ಬೇಸಿಗೆಯು ತುಂಬ ಬಿಸಿಯೂ ಒಣದಾಗಿಯೂ ಇದ್ದು ಮನೆಯಿಂದ ಹೊರಗೆ ಬೀಳುವುದನ್ನು ಅಸಾಧ್ಯವನ್ನಾಗಿ ಮಾಡುತ್ತದೆ. ಸುಡುವ ಸೂರ್ಯನು ನಿಮಗೆ ತಲೆನೋವನ್ನು ತರಿಸಬಹುದು, ನಿರ್ಜಲೀಕರಣವನ್ನುಂಟು ಮಾಡಬಹುದು. ಬೇಸಿಗೆಯು ಸಾಮಾನ್ಯವಾಗಿ ಮಾರ್ಚ್ ನಡುವಿನಲ್ಲಿ ಆರಂಭವಾಗಿ ಮೇ ಕೊನೆಯವರೆಗೆ ಮುಂದುವರೆಯುತ್ತದೆ. ಬೆಸಿಗೆಯಲ್ಲಿ ಅತಿ ಹೆಚ್ಚು ಉಷ್ಣತಾಮಾನವು 37 ಡಿಗ್ರಿ ಸೆಲ್ಶಿಯಸ್ ತಲುಪಬಹುದು.

ಮಳೆಗಾಲ

ಮಳೆಗಾಲದಲ್ಲಿ ನಗರವು ಸಾಧಾರಣದಿಂದ ಭಾರೀ ಮಳೆಯನ್ನು ಪಡೆಯುತ್ತದೆ. ಅದರಿಂದಾಗಿ ಹಿತಕರ ಹವಾಗುಣ ಮತ್ತು ಒಳ್ಳೆಯ ಉಷ್ಣತಾಮಾನವಿದ್ದಾಗ್ಯೂ  ಪ್ರೇಕ್ಷಣೀಯ ಸ್ಥಳಗಳಿಗೆ ಪ್ರಯಾಣವನ್ನು ಕಠಿಣಗೊಳಿಸುತ್ತದೆ. ಮಾನ್ಸೂನು ಮೇ ಕೊನೆಗೆ ಆರಂಭವಾಗಿ ಸೆಪ್ಟೆಂಬರ್ ಮಧ್ಯದವರೆಗೆ  ಮುಂದುವರೆಯುತ್ತದೆ.  ಮಳೆಗಾಲದಲ್ಲಿನ ಗರಿಷ್ಠ ಉಷ್ಣತಾಮಾನವು  21- 27 ಡಿಗ್ರೀ ಸೆಲ್ಶಿಯಸ್ ನಡುವೆ ಇರುತ್ತದೆ.

ಚಳಿಗಾಲ

ಕಾಂಚೀಪುರಂನಲ್ಲಿ ಚಳಿಗಾಲವು ನವೆಂಬರ್ ಮಧ್ಯದಲ್ಲಿ ಆರಂಭವಾಗಿ ಫೆಬ್ರುವರಿಯಲ್ಲಿ ಕೊನೆಗೊಳ್ಳುತ್ತದೆ. ಆದರೆ ಬೆಳಗಿನ ಮತ್ತು ಹಗಲಿನ ಹೊತ್ತು ಹಿತಕರವಾಗಿರುತ್ತದೆ. ರಾತ್ರಿಯ ಹೊತ್ತು ನಿಮಗೆ ದಪ್ಪ ಉಣ್ಣೆಯ ಬಟ್ಟೆಗಳ ಅಗತ್ಯವೇನೂ ಬೀಳುವುದಿಲ್ಲ, ಒಂದು ಶಾಲು ಅಥವಾ ಹಗುರ ಜಾಕೆಟ್ ನಿಮಗೆ ಸಾಕು. ಚಳಿಗಾಲದಲ್ಲಿ ಉಷ್ಣತಾಮಾನವು  19 ಡಿಗ್ರಿಗಳಿಗಿಂತ ಕೆಳಕ್ಕಿಳಿಯುವದಿಲ್ಲ ಮತ್ತು 21 ಡಿಗ್ರಿಗಳಿಗಿಂತ ಮೇಲಕ್ಕೂ ಏರುವದಿಲ್ಲ.