ಕಾಮಾಕ್ಷಿ ದೇವಾಲಯವು ಪಾರ್ವತೀದೇವಿಯ ಒಂದು ರೂಪವಾದ ಕಾಮಾಕ್ಷಿಗಾಗಿ ಇದೆ. ಬಹುಶಃ ದೇವಾಲಯವನ್ನು ಪಲ್ಲವ ವಂಶದ ರಾಜರು ಆರನೇಯ ಶತಮಾನದಲ್ಲಿ ಕಟ್ಟಿದರು.
ಇಲ್ಲಿನ ಮೂರ್ತಿಯ ವಿಶೇಷವೆಂದರೆ ದೇವಿ ಕಾಮಾಕ್ಷಿಯು ನಿಂತಿರುವ ಭಂಗಿಯಲ್ಲಿ ಇಲ್ಲ, ಕುಳಿತಿರುವ ಭಂಗಿಯಲ್ಲಿ ಇದ್ದಾಳೆ. ದೇವಿಯು ಯೋಗಮುದ್ರೆಯಲ್ಲಿ ಕುಳಿತಿದ್ದು, ತುಂಬ ಶಾಂತ ಮತ್ತು ಗಂಭೀರವಾಗಿದ್ದಾಳೆ. ಆಶ್ಚರ್ಯವೆಂದರೆ ಹಿಂದೂಗಳಲ್ಲಿ ತುಂಬ ಜನಪ್ರಿಯ ದೇವತೆಯಾಗಿದ್ದರೂ ಪಾರ್ವತಿಯ ಈ ನಗರದಲ್ಲಿನ ಏಕೈಕ ದೇವಾಲಯವಾಗಿದೆ.
ಮೂಲ ಭಾಗಗಳು ನೈಸರ್ಗಿಕಪ್ರಕೋಪಗಳಲ್ಲಿ ನಾಶವಾದ ಕಾರಣಕ್ಕೋ ಅಥವಾ ಕಾಲನ ಹೊಡೆತವನ್ನು ತಾಳದೆ ಇದ್ದ ಕಾರಣಕ್ಕೋ ಈ ದೇವಾಲಯದ ಅನೇಕ ಭಾಗಗಳು ಮರುನಿರ್ಮಾಣ ಕಂಡಿವೆ. ಏನೇ ಇರಲಿ, ಕಾಂಚೀಪುರಂನ ಎಲ್ಲ ರಾಜರು ಮೊದಲು ನಿರ್ಮಾಣಗೊಂಡಿದ್ದಂತೆ ದೇವಾಲಯವನ್ನು ಮರುನಿರ್ಮಿಸಲು ತಮಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ. ಮೊದಲಿಗೆ ದೇವಾಲಯವನ್ನು ಕಟ್ಟಿದಾಗ ಗೋಡೆಗಳ ಮೇಲೆ ಇದ್ದ ಮೂಲದ ವಾಸ್ತುಶಿಲ್ಪವನ್ನು ಗುರುತಿಸುವಲ್ಲಿ ಸೂಕ್ಷ್ಮ ದೃಷ್ಟಿಯುಳ್ಳವರು ಯಶಸ್ವಿಯಾಗುತ್ತಾರೆ.


Click it and Unblock the Notifications