Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಳಹಸ್ತಿ » ಆಕರ್ಷಣೆಗಳು » ವೆಯಿಲಿಂಗಲ ಕೋನ ಜಲಪಾತ

ವೆಯಿಲಿಂಗಲ ಕೋನ ಜಲಪಾತ, ಕಾಳಹಸ್ತಿ

1

ಶ್ರೀಕಾಳಹಸ್ತಿ ಸಮೀಪದಲ್ಲೇ ಇರುವ ವೆಯಿಲಿಂಗಲ ಕೋನ ಜಲಪಾತಕ್ಕೆ ಪಟ್ಟಣದಿಂದ 8 ಕಿ.ಮೀ.ಗಳಷ್ಟೇ ಕ್ರಮಿಸಿದರೆ ಸಾಕು. ನೈಸರ್ಗಿಕ ಸೊಬಗನ್ನೇ ತನ್ನ ಒಡಲಲ್ಲಿಟ್ಟುಕೊಂಡಂತೆ ಭಾಸವಾಗುವ ಜಲಪಾತ, ಪ್ರವಾಸಿಗರಿಗೆ ಹತ್ತಿರವಾಗುತ್ತದೆ. ತೆಲುಗು ಮೂಲದಿಂದ ಹೆಸರು ಪಡೆದಿರುವ ಈ ಜಲಪಾತದ ಅರ್ಥ ಸಾವಿರ ಲಿಂಗಗಳಿರುವ ಕಣಿವೆ ಎಂಬುದು. ಜಲಪಾತದ ಸುತ್ತಲೂ ಶಿವಲಿಂಗವನ್ನೇ ಹೋಲುವ ಸಾವಿರಾರು ಕಲ್ಲುಗಳಿರುವುದರಿಂದ ಪ್ರದೇಶಕ್ಕೆ ಈ ಹೆಸರು ಬಂದಿದೆಯಂತೆ. ಮಕ್ಕಳಿಂದ, ವಯೋವೃದ್ಧರಾದಿಯಾಗಿ ಈ ಜಲಪಾತದಲ್ಲಿ ಸಮಯ ಕಳೆಯದೆ ವಾಪಸಾಗಲು ಮನಸಾಗುವುದಿಲ್ಲ. ಅಲ್ಲದೇ, ಜಲಪಾತದ ನೀರಿನಲ್ಲಿ ವಿಶಿಷ್ಟ ನೋವುನಿವಾರಕ ಗುಣಗಳಿವೆ ಎಂಬುದು ಇಲ್ಲಿಗೆ ಪ್ರತಿ ವರ್ಷ ಭೇಟಿ ನೀಡುವ ಪ್ರವಾಸಿಗರ ಅಚಲ ನಂಬಿಕೆ. ಜಲಪಾತಕ್ಕೆ ಮೈಯೊಡ್ಡಿ ನಿಂತರೆ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಮಾಯವಾಗುತ್ತವೆ ಎಂಬ ಪ್ರತೀತಿಯೂ ಇದೆ. ಶಿವಲಿಂಗಗಳ ಸನ್ನಿಧಿಯಲ್ಲೇ ಇರುವ ಜಲಪಾತದಲ್ಲಿ ಸ್ನಾನ ಮಾಡುವುದರಿಂದ ಮಾನವರ ಪೂರ್ವ ಜನ್ಮದ ಪಾಪಗಳೆಲ್ಲ ಮಾಯವಾಗಿ, ಮುಕ್ತಿ ಸಿಗುತ್ತದೆ ಎಂಬುದು ಸ್ಥಳೀಯರ ವಾಗ್ದಾನ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed