ಶ್ರೀಕಾಳಹಸ್ತಿಯ ಮತ್ತೊಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಸಹಸ್ರಲಿಂಗ ದೇವಸ್ಥಾನ ಪಟ್ಟಣದ ಪ್ರಮುಖ ದೇವಸ್ಥಾನಗಳಲ್ಲೊಂದು. ಬಹುಮುಖ್ಯವಾಗಿ ಕಾಡಿನ ಮಧ್ಯೆ ಸ್ಥಾಪಿತವಾಗಿರುವ ಈ ದೇವಸ್ಥಾನದ ಸುತ್ತ ನೈಸರ್ಗಿಕ ಸೊಬಗಿನ ರುದ್ರ ರಮಣೀಯ ದೃಶ್ಯಗಳು ಕಣ್ಮನ ಸೆಳೆಯುತ್ತವೆ. ದೇವಸ್ಥಾನದ ಹಿಂಭಾಗ ಬೆಟ್ಟದಿಂದ ಆವೃತವಾಗಿದೆ ನೈಸರ್ಗಿಕ ಸೊಬಗನ್ನು ಮತ್ತಷ್ಟು ಹೆಚ್ಚಿಸಿವೆ. ಹೆಸರಿಗೆ ತಕ್ಕಂತೆ ಸಹಸ್ರ ಎಂದರೆ ಸಾವಿರ ಲಿಂಗಗಳನ್ನು ಒಂದೇ ಬೃಹತ್ ಲಿಂಗದಲ್ಲಿ ಕೆತ್ತಿರುವ ರೀತಿ ಸುಂದರವಾಗಿದೆ. ಸಹಸ್ರಲಿಂಗದ ದರ್ಶನದಿಂದ ಜನ್ಮಜನ್ಮಾಂತರಗಳ ಪಾಪಗಳೂ ನಿವಾರಣೆಯಾಗುತ್ತವೆ ಎಂಬುದು ಪ್ರತೀತಿ.


Click it and Unblock the Notifications