ಕಾಳಹಸ್ತಿಯ ಮತ್ತೊಂದು ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ದುರ್ಗಾಂಬಿಕಾ ದೇವಸ್ಥಾನ ಅತ್ಯಂತ ಪ್ರಾಚೀನವಾದುದು. ಹಿಂದೂ ಸಂಪ್ರದಾಯದ ಅದೆಷ್ಟೋ ದೇವತೆಯರ ಸನ್ನಿಧಿಯಂತೆ ದುರ್ಗಾಂಬಿಕೆ ದೇವಸ್ಥಾನವನ್ನು ಸಣ್ಣ ದಿಬ್ಬವೊಂದರ ಮೇಲೆ ಕಟ್ಟಲಾಗಿದೆ. ಕಾಳಹಸ್ತೀಶ್ವರ ದೇವಸ್ಥಾನದ ಉತ್ತರ ಭಾಗದಲ್ಲಿರುವ ದುರ್ಗಾಂಬಿಕೆ ದೇವಸ್ಥಾನವನ್ನು ಸಮುದ್ರಮಟ್ಟಕ್ಕಿಂತ 800 ಮೀಟರ್ ಮೇಲಿರುವ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ವಿಶಿಷ್ಟ ನೈಸರ್ಗಿಕ ಮೆರುಗು ಹೊಂದಿರುವ ದೇವಸ್ಥಾನದ ಸನ್ನಿಧಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದಿಬ್ಬದಿಂದ ದೇವಸ್ಥಾನದವರೆಗೆ ದೊಡ್ಡ, ಅಗಲವಾದ ಮೆಟ್ಟಿಲುಗಳನ್ನು ನಿರ್ಮಿಸಿರುವುದು, ಆಯಾಸವಿಲ್ಲದೇ ದರ್ಶನ ಪಡೆಯಲು ಮತ್ತಷ್ಟು ಅನುಕೂಲಕರವಾಗಿದೆ. ಜೀವದಾತೆಯರೆಂದೇ ಕರೆಸಿಕೊಳ್ಳುವ, ದುರ್ಗಾಂಬಿಕೆ ಮೇಲೆ ಸ್ಥಳೀಯರು, ಪ್ರವಾಸಿಗರಿಗೆ ಅಪಾರ ನಂಬಿಕೆ.


Click it and Unblock the Notifications