ರಂಗೀತ್ ನದಿ ತೀತ್ಸಾ ನದಿಯ ಉಪನದಿ, ಸಿಕ್ಕಿಂ ನ ಅತಿ ದೊಡ್ಡ ನದಿ. ಪಶ್ಚಿಮ ಸಿಕ್ಕಿಂ ನ ಹಿಮಾಲಯದ ತಪ್ಪಲಿನಲ್ಲಿ ಇದು ಹುಟ್ಟುತ್ತದೆ ಬೇಸಿಗೆಯಲ್ಲಿ ಹಿಮಾಲಯದ ಮಂಜು ಕರಗಿ ಮತ್ತು ಮಳೆಗಾಲದ ನೀರಿನಿಂದ ಈ ನದಿ ಹುಟ್ಟುತ್ತದೆ. ಈ ನದಿ ಸಣ್ಣ ನದಿಗಳನ್ನು ಹೊಂದಿದ್ದು ರಾಫ್ಟಿಂಗ್ ಗೆ ಹೆಚ್ಚು ಆಕರ್ಷಣೀಯವಾಗಿದೆ. ನದಿ 60 ಎಂ ವಿ ಸಾಮರ್ಥ್ಯದ ಒಂದು ರಾಷ್ಟ್ರೀಯ ಜಲವಿದ್ಯುತ್ ಪವರ್ ಕಾರ್ಪೋರೇಷನ್ (NHPC) ಜಲಶಕ್ತಿ ವಿದ್ಯುತ್ ಘಟಕವನ್ನು ಹೊಂದಿದೆ.