ಜೊರೆಥಾಂಗ್ ಜನವರಿಯಲ್ಲಿ ನಡೆಯುವ ಮಘೆ ಮೇಳಕ್ಕೆ ಹೆಚ್ಚು ಜನಪ್ರಿಯತೆ ಹೊಂದಿದೆ. ಈ ಸಮಯದಲ್ಲಿ ಸಾಕಷ್ಟು ಪ್ರವಾಸಿಗರು ಆಗಮಿಸುವುದರಿಂದ ಇದರ ಭವ್ಯತೆಯನ್ನು ಆನಂದಿಸುತ್ತಾರೆ. 1955 ರಲ್ಲಿ ಮಾಡಲಾದ ಕೃಷಿ ಮೇಳದಿಂದ ಇದನ್ನು ಪ್ರಾರಂಭಿಸಲಾಯಿತು ಎನ್ನಲಾಗಿದೆ. ಮಘೆ ಮೇಳ ಜನಪ್ರಿಯತೆಯನ್ನು ಪಡೆದಿದ್ದು ಆಸಕ್ತಿಕಾರಕವಾದ ಸಿಕ್ಕಿಂ ಜನಾಂಗದ ಸಾಂಸ್ಕೃತಿಕ ಚಟುವಟಿಕೆಗಳಾದ ಜೊರೆಥಾಂಗ್ ಮ್ಯಾರಾಥಾನ್,ಫ್ಯಾಶನ್ ಷೋ,ಸಾಂಸ್ಕೃತಿಕ ನೃತ್ಯ,ಬಲೂನ್ ಷೋ,ಪ್ಯಾರಾಗ್ಲೈಡಿಂಗ್, ಸೌಂದರ್ಯ ಪ್ರದರ್ಶನ ಮತ್ತು ಬಿಲ್ಲುಗಾರಿಕೆ ಸ್ಪರ್ಧೆ,ನದಿ ರಾಫ್ಟಿಂಗ್ ಮುಂತಾದವುಗಳನ್ನು ಹಮ್ಮಿಕೊಳ್ಳುತ್ತಾರೆ.ಇಷ್ಟೇ ಅಲ್ಲ ಈ ಸಮಯದಲ್ಲಿ ಇದು ಸಿಕ್ಕಿಂ ಸಾಂಪ್ರದಾಯಿಕ ಆಹಾರವನ್ನು ತಿಳಿಸುವ ಆಹಾರ ಮಳಿಗೆಗಳನ್ನೂ ಇರಿಸಲಾಗುತ್ತದೆ.