ಶಿವಮಂದಿರವನ್ನು ಸುಲ್ತಾನಪುರದ ಲೋಧಿಯ ಉಚ್ಚ ಆಡಳಿತದ ಸಮಯದಲ್ಲಿ ನಿರ್ಮಿಸಲಾಗಿದೆ, ಇದು ಗುರ್ ಮಂಡಿಯಲ್ಲಿದೆ. ದಂಥಕಥೆಯ ಪ್ರಕಾರ, ಇಲ್ಲಿನ ನವಾಬನು ಹೊಸದಾಗಿ ಮದುವೆಯಾದ ಹಿಂದೂ ಹುಡುಗಿಯೊಬ್ಬಳ ಮೇಲೆ ಕೆಟ್ಟ ದೃಷ್ಟಿಯನ್ನು ಬಿಟ್ಟನು, ಆದರೆ ಅವಳೊಬ್ಬ ಶಿವ ಭಕ್ತೆಯಾಗಿದ್ದು ಬಾಸುಖಿ ಎನ್ನುವ ಸರ್ಪವು ಅವಳನ್ನು ನವಾಬನಿಂದ ರಕ್ಷಿಸಿತು. ನಂತರ ನವಾಬನು ಅವಳಲ್ಲಿ ಕ್ಷಮಾಪಣೆ ಕೇಳಿ ಅವಳ ನಿರ್ದೇಶನದಂತೆ ಈ ಶಿವ ಮಂದಿರ ನಿರ್ಮಿಸಿದನು ಎನ್ನುವುದು ಪ್ರತೀತಿ. ಶಿವಮುಂದಿರದ ಮುಂಭಾಗವು ಮಸೀದಿಯನ್ನು ಹೋಲುವಂತೆ ಮತ್ತು ಉಳಿದ ಭಾಗವು ಹಿಂದೂ ವಿನ್ಯಾಸದಂತೆ ನಿರ್ಮಿತವಾಗಿದೆ.


Click it and Unblock the Notifications