ಗಣೇಶ್ ಪೋಲ್, ಅಂಬರ್ ಕೋಟೆಯ ಮುಖ್ಯ ಅರಮನೆಯಲ್ಲಿದೆ. ರಾಜ ಎರಡನೇ ಜೈ ಸಿಂಗ್ ಇದನ್ನು 1611 ಮತ್ತು 1667ರ ಮಧ್ಯೆ ಕಟ್ಟಿಸಿದ. ಅಂಬರ್ ಕೋಟೆಗೆ ಏಳು ಮುಖ್ಯ ದ್ವಾರಗಳಿವೆ. ಇವುಗಳಲ್ಲಿ ಗಣೇಶ್ ಪೋಲ್ ಕೂಡಾ ಒಂದು. ಈ ಪ್ರವೇಶ ದ್ವಾರದ ಮೂಲಕ ಕೇವಲ ರಾಜ ಮತ್ತು ಆತನ ಮನೆತನದವರಿಗೆ ಮಾತ್ರ ಪ್ರವೇಶವಿತ್ತು. ಇದರಿಂದಾಗಿ ಅವರು ನೇರವಾಗಿ ಕೋಟೆಯ ಒಳಗೆ, ತಮ್ಮ ಖಾಸಗಿ ಕೋಣೆಗಳಿಗೆ ಹೋಗಬಹುದಿತ್ತು. ಸುಂದರ ವರ್ಣದ ಗಣೇಶನ ಮೂರ್ತಿಯನ್ನು ಇಲ್ಲಿ ಸ್ಥಾಪಿಸಲಾಗಿದೆ. ಈ ಪ್ರವೇಶ ದ್ವಾರದ ನಿರ್ಮಾಣವು ಮೊಘಲ್ ಮತ್ತು ರಜಪೂತ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.