ಜೈನ್ತಿಯಾ ರಾಜದ ಅಣತಿಯಂತೆ ಉ ಮಾರ್ ಫಲ್ಯನ್ಗಕಿ ಮತ್ತು ಉ ಲುಹ ಲ್ಯನ್ಗಸ್ಕರ್ ಲಮರೆ ಥಲ್ಮುವಿ ಕಲ್ಲಿನ ಸೇತುವೆಯನ್ನು ನಿರ್ಮಿಸಿದರು. ಜೈನ್ತಿಯಾದ ರಾಜ ತನ್ನ ಬೇಸಿಗೆ ರಾಜಧಾನಿಯನ್ನು ಸುತ್ನಗದಿಂದ ನರ್ತಿಯಾಂಗ್ ಗೆ ಬದಲಾಯಿಸಿದ. ಇದಕ್ಕಾಗಿ ಆತ ಬೇಸಿಗೆ ರಾಜಧಾನಿ ನರ್ತಿಯಾಂಗ್ ಮತ್ತು ರಾಜ್ಯದ ಮೂಲ ರಾಜಧಾನಿ ಜೈನ್ತಿಯಪುರಗೆ ಸಂಪರ್ಕ ಕಲ್ಪಿಸಲು ಬಯಸಿದೆ. ಇದಕ್ಕಾಗಿ ಆತ ಲೆಫ್ಟಿನೆಂಟ್ ಗಳಾದ ಉ ಮಾರ್ ಫಲ್ಯನ್ಗಕಿ ಮತ್ತು ಉ ಲುಹ ಲ್ಯನ್ಗಸ್ಕರ್ ಲಮರೆಗೆ ಎರಡು ಪ್ರದೇಶಗಳನ್ನು ಸಂಪರ್ಕಿಸುವಂತಹ ಸೇತುವೆಯನ್ನು ನಿರ್ಮಿಸಲು ಸೂಚಿಸಿದ. ಥಲ್ಮುವಿ ಹೊಳೆಗೆ ಅಡ್ಡಲಾಗಿ ಭವ್ಯ ಕಲ್ಲಿನ ಸೇತುವೆಯನ್ನು ನಿರ್ಮಿಸಲಾಯಿತು. ಕಲ್ಲಿನ ಚಪ್ಪಡಿಗಳಿಂದ ನಿರ್ಮಿಸಲಾಗಿರುವ ಸೇತುವೆಗೆ ಕಲ್ಲಿನಿಂದಲೇ ಕಟ್ಟಲಾದ ಕಂಬಗಳಿವೆ.
ಕೆಲವು ಶತಮಾನಗಳು ಮೊದಲು ಆನೆ ವ್ಯಾಪಾರಿಯೊಬ್ಬ ಇದರ ಮೇಲೆ ಹಲವಾರು ಆನೆಗಳನ್ನು ಸಾಗಿಸುತ್ತಿದ್ದಾಗ ಒಂದು ಕಲ್ಲಿನ ಚಪ್ಪಡಿ ಕುಸಿದಿತ್ತು. ಇದರ ಹೊರತಾಗಿಯೂ ಇಂದಿಗೂ ಈ ಸೇತುವೆ ಬಲಿಷ್ಠವಾಗಿ ನಿಂತಿದೆ.ಥಲ್ಮುವಿ ಹೊಳೆಯ ದಡದ ಸಮೀಪದಲ್ಲೇ ಇರುವ ಮುವಿ ಜಲಪಾತ ಪ್ರಕೃತಿಯ ಸುಂದರ ಮತ್ತು ಅತ್ಯುತ್ತಮ ದೃಶ್ಯಾವಳಿಯನ್ನು ತೋರಿಸುತ್ತದೆ.


Click it and Unblock the Notifications