ಥಡ್ಲಸ್ಕೈನ್ ಸರೋವರ ಜೈನ್ತಿಯಾ ಹಿಲ್ಸ್ ಗೆ ಬರುವ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಜನಪ್ರಿಯ ಪಿಕ್ನಿಕ್ ತಾಣವಾಗಿದೆ. ಜೈನ್ತಿಯಪುರದ ಅಂದಿನ ರಾಜನ ಕ್ರೋಧದಿಂದ ಪಾರಾಗಲು ಸಜ್ಜರ್ ನಿಯಂಗ್ಲಿ ಗ್ರಾಮದ ಸುಮಾರ 290 ಬುಡಕಟ್ಟು ಜನಾಂಗದವರು ಬಾಣಗಳನ್ನು ಉಪಯೋಗಿಸಿ ಈ ಸರೋವರನ್ನು ರಚಿಸಿದರು ಎನ್ನುವ ದಂತಕಥೆಯಿದೆ. ಇಂದು ಕೂಡ ಇಲ್ಲಿ ರಯಿಡ್ ಮುಖಾಲ ಬುಡಕಟ್ಟು ಜನಾಂಗದವರು ಈ ಸರೋವರವನ್ನು ಪೂಜಿಸುತ್ತಾರೆ ಮತ್ತು ಸಮೀಪದಲ್ಲೇ ಬಲಿಪೂಜೆ ನೆರವೇರಿಸುತ್ತಾರೆ.
ಐತಿಹಾಸಿಕ ಮಹತ್ವವನ್ನು ಹೊರತುಪಡಿಸಿ, ಥಡ್ಲಸ್ಕೈನ್ ಒಂದು ಸುಂದರ ಸರೋವರ ಹಾಗೂ ವಿಹಾರ, ಪಿಕ್ನಿಕ್ ಮತ್ತು ಬೋಟಿಂಗ್ ಗೆ ತುಂಬಾ ಜನಪ್ರಿಯವಾಗಿದೆ. ಸರೋವರವನ್ನು ಸುಂದರ ಹುಲ್ಲುಗಾವಲು ಮತ್ತು ನದಿ ಮ್ಯನ್ತದು ಸುತ್ತುವರಿದಿದೆ. ಹಲವಾರು ಬಗೆಯ ಹೂಗಳನ್ನು ಕಾಣಬಹುದು. ಸುತ್ತಮುತ್ತಲಿರುವ ಸಸ್ಯ ಮತ್ತು ಪ್ರಾಣಿ ಸಂಕುಲಗಳು ರುದ್ರರಮಣೀಯ ಮತ್ತು ಪ್ರಕೃತಿ ಪ್ರಿಯರಿಗೆ ಸ್ವರ್ಗವೆನಿಸಿದೆ.ಥಡ್ಲಸ್ಕೈನ್ ಸರೋವರ ಶಿಲ್ಲಾಂಗ್ ನಿಂದ ಸುಮಾರು 58 ಕಿ.ಮೀ. ದೂರದಲ್ಲಿದೆ ಮತ್ತು ಜೊವಾಯಿಯಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಈ ಎರಡು ಕಡೆಯಿಂದ ಯಾವುದಾದರೊಂದು ಪ್ರವಾಸಿ ವಾಹನವನ್ನು ಹಿಡಿದು ಇಲ್ಲಿಗೆ ಸುಲಭವಾಗಿ ತಲುಪಬಹುದು.


Click it and Unblock the Notifications