ಜೈನ್ತಿಯಾ ಹಿಲ್ಸ್ ನಲ್ಲಿರುವ ಸಣ್ಣ ಗ್ರಾಮ ದವ್ಕಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಗಡಿದಾಟುವ ಪ್ರದೇಶವಾಗಿದೆ. ಭಾರತದಿಂದ ಬಾಂಗ್ಲಾದೇಸಕ್ಕೆ ಕಲ್ಲಿದ್ದಲು ಸಾಗಿಸಲು ಈ ಹಾದಿಯನ್ನು ಬಳಸಲಾಗುತ್ತದೆ ಮತ್ತು ಪರ್ವಕಾಲದಲ್ಲಿ ಪ್ರತೀ ದಿನ ಸುಮಾರು 500ರಷ್ಟು ಟ್ರಕ್ ಗಳು ಗಡಿದಾಟುತ್ತದೆ.
ದವ್ಕಿಯಲ್ಲಿ ಉಮ್ನಗಾಟ್ ನದಿಯಿದ್ದು, ಪ್ರತೀ ವರ್ಷ ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ಉಮ್ಸೈಮದಲ್ಲಿ ವಾರ್ಷಿಕ ಬೋಟ್ ರೇಸ್ ಆಯೋಜಿಸಲಾಗುತ್ತದೆ. ಉಮ್ನಗಾಟ್ ನದಿ ಜೈನ್ತಿಯಾ ಹಿಲ್ಸ್ ಮತ್ತು ಖಾಸಿ ಹಿಲ್ಸ್ ಮಧ್ಯೆ ನೈಸರ್ಗಿಕ ಗಡಿಯನ್ನು ನಿರ್ಮಿಸುತ್ತದೆ. 1932ಲ್ಲಿ ಬ್ರಿಟಿಷರು ದೊಡ್ಡ ತೂಗು ಸೇತುವೆಯನ್ನು ನಿರ್ಮಿಸಿದ್ದು, ಇದು ಎರಡು ಜಿಲ್ಲೆಗಳನ್ನು ಸಂಪರ್ಕಿಸುತ್ತದೆ.
ಶಿಲ್ಲಾಂಗ್ ನ ಬರಾ ಬಜಾರ್ ನಿಂದ ದವ್ಕಿಗೆ ಶೇರ್ಡ್ ಸಾರಿಗೆ ಮತ್ತು ಬೆಳಗ್ಗಿನ ಬಸ್ ಗಳು ಲಭ್ಯವಿದೆ. ಟೂರಿಸ್ಟ್ ಬಸ್ ಅಥವಾ ಕ್ಯಾಬ್ ಮೂಲಕ ಆರಾಮ ಮತ್ತು ಆಹ್ಲಾದಕರವಾಗಿ ತಲುಪಬಹುದು. ಇನ್ನೊಂದು ಬದಿಯಲ್ಲಿ ತಮಬಿಲ್ ನಲ್ಲಿ ಬಸ್ ನಿಲ್ದಾಣವಿದ್ದು, ಇದು ಸೈಲ್ಹೆಟ್(ಬಾಂಗ್ಲಾದೇಶ)ಗೆ ಬಸ್ ಸೇವೆಯನ್ನು ಒದಗಿಸುತ್ತದೆ.


Click it and Unblock the Notifications