Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಮೇಘ್‍ಧೂತ್ ಉಪವನ್

ಮೇಘ್‍ಧೂತ್ ಉಪವನ್, ಇಂದೋರ್

1

ಮೇಘ್‍ಧೂತ್ ಉಪವನ್ ಎಂಬುದು ಇಂದೋರಿನಲ್ಲಿರುವ ಒಂದು ದೊಡ್ಡ ಉದ್ಯಾನವನವಾಗಿದೆ. ಈ ದೊಡ್ಡ ಉದ್ಯಾನವನವು ಸ್ಥಳೀಯರ ಮತ್ತು ಪ್ರವಾಸಿಗರ ವಲಯದಲ್ಲಿ ಭಾರೀ ಜನಪ್ರಿಯಗೊಂಡಿದೆ. ಹಾಗಾಗಿ ಈ ಉದ್ಯಾನವನವು ವಾರದ ಎಲ್ಲಾ ದಿನಗಳಲ್ಲೂ ಜನರಿಂದ ತುಂಬಿ ತುಳುಕುತ್ತಿರುತ್ತದೆ. ಅದರಲ್ಲಿಯೂ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಇಲ್ಲಿ ಜನಸಾಗರವೇ ಸೇರಿರುತ್ತದೆ. ಜನರು ತಮ್ಮ ಮಕ್ಕಳೊಂದಿಗೆ ಕಾಲಕಳೆಯಲೆಂದು ಇಲ್ಲಿಗೆ ಹೆಚ್ಚಾಗಿ ಆಗಮಿಸುತ್ತಿರುತ್ತಾರೆ. ಈ ಉದ್ಯಾನವನದಲ್ಲಿ ವೈಭವಯುತವಾದ ಹುಲ್ಲುಹಾಸುಗಳು, ಉದ್ಯಾನವನದಿಂದ ಕೂಡಿದ ಮೇಲ್ಛಾವಣಿಗಳು, ಅಲಂಕಾರಿಕ ನೀರಿನ ಕಾರಂಜಿಗಳು, ತಿರುಗುವ ಝರಿಗಳು ಮತ್ತು ಇನ್ನಿತರ ಆಕರ್ಷಣೆಗಳನ್ನು ನಾವಿಲ್ಲಿ ನೋಡಬಹುದು.

ಮೇಘ್‍ದೂತ್ ಉಪವನ್ ಎಂಬುದು ಇಂದೋರಿನ ಒಂದು ಅದ್ಭುತ ಸಂಪತ್ತಾಗಿದೆ. ನಗರ ಜೀವನದ ದೈನಂದಿನ ಜಂಜಡಗಳನ್ನು ಮರೆತು ನೆಮ್ಮದಿಯಾಗಿ ತಮ್ಮ ಕುಟುಂಬದ ಸದಸ್ಯರ ಜೊತೆಗೆ ಕಾಲ ಕಳೆಯಲು ಈ ಉದ್ಯಾನವನವು ಹೇಳಿ ಮಾಡಿಸಿದ ಸ್ಥಳವಾಗಿದೆ. ಇದಲ್ಲದೆ ಇಲ್ಲಿಗೆ ಸಮೀಪದಲ್ಲಿರುವ ಮಂಗಲ್ ಮೆರ್‍ರಿಲ್ಯಾಂಡ್ ಅಮ್ಯೂಸ್‍ಮೆಂಟ್ ಪಾರ್ಕಿಗೆ ಭೇಟಿ ಕೊಡಲು ಸಹ ಜನರು ಬರುತ್ತಿರುತ್ತಾರೆ. ಇದು ಸಹ ಇಂದೋರಿನಲ್ಲಿರುವ ಮತ್ತೊಂದು ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed