ಗೀತಾ ಭವನ್ ಎನ್ನುವುದು ಇಂದೋರಿನ ಒಂದು ಅನುಪಮವಾದ ರಚನೆಯಾಗಿದೆ. ಮೂಲತಃ ಇದು ಒಂದು ಗುಡಿಯಾಗಿದೆ. ಈ ಗುಡಿಯ ವೈಶಿಷ್ಟ್ಯತೆಯೇನೆಂದರೆ ಈ ಗುಡಿಯು ಯಾವುದೇ ಜಾತಿ, ಸಮುದಾಯ ಅಥವಾ ಧರ್ಮಕ್ಕೆ ಸೇರಿಲ್ಲ. ಅದಕ್ಕೆ ಬದಲಾಗಿ ಈ ಗುಡಿಯು ಜನರ ನಂಬಿಕೆಗಳಿಗೆ ಅರ್ಪಣೆಗೊಂಡಿದೆ. ಹಾಗಾಗಿ ಹಲವು ಧರ್ಮಗಳಿಗೆ ಸೇರಿದ ಜನರು ತಮ್ಮ ಭಗವಂತನಿಗೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಇಲ್ಲಿಗೆ ಆಗಮಿಸುತ್ತಾರೆ. ಈ ಗುಡಿಯಲ್ಲಿ ಹಲವಾರು ಧರ್ಮಗಳಿಗೆ ಸೇರಿದ ಶಿಲ್ಪಗಳು ಇವೆ. ನಯನ ಮನೋಹರವಾದ ಹಜಾರವನ್ನು ಪುರಾಣ, ರಾಮಾಯಣ ಮತ್ತು ಮಹಾಭಾರತಗಳಿಗೆ ಸೇರಿದ ವರ್ಣಚಿತ್ರಗಳಿಂದ ಅಲಂಕರಿಸಲಾಗಿದೆ.
ಈ ಗುಡಿಯು "ಪ್ರವಚನ"ಗಳನ್ನು ಪ್ರೋತ್ಸಾಹಿಸುತ್ತದೆ. ಆದ್ದರಿಂದ ಇಲ್ಲಿ ಸಾಮಾನ್ಯವಾಗಿ ಪ್ರವಚನಗಳು ನಡೆಯುತ್ತ ಇರುತ್ತದೆ. ಈ ಗುಡಿಯು ತನ್ನ ಸೌಂದರ್ಯ ಮತ್ತು ಸ್ಫೂರ್ತಿಯ ಸಲುವಾಗಿ ಸ್ಥಳಿಯರಲ್ಲು ಮತ್ತು ಪ್ರವಾಸಿಗರಲ್ಲು ಜನಪ್ರಿಯತೆಗೊಂಡಿದೆ. ಇಲ್ಲಿ ಪ್ರತಿ ವರ್ಷವು ಒಂದು ವಾರ್ಷಿಕ ಕಾರ್ಯಕ್ರಮ ನಡೆಯುತ್ತದೆ. ಆಗ ಇಲ್ಲಿಗೆ ಅಬಾಲ ವೃದ್ಧರಾದಿಯಾಗಿ ಎಲ್ಲಾ ವರ್ಗದ ಜನರು ಆಗಮಿಸುತ್ತಾರೆ.


Click it and Unblock the Notifications