ತ್ರಿಮುಲ್ಗೇರ್ರಿ ಚರ್ಚ್ ಅಥವಾ ಎಲ್ಲ ಸಂತರ ಚರ್ಚ್ ಎಂದು ಖ್ಯಾತಿ ಪಡೆದಿರುವ ಚರ್ಚ್ ಇಲ್ಲಿದೆ. ಇದು ಚರ್ಚ್ ಆಫ್ ಸೌತ್ ಇಂಡಿಯಾನ ಒಂದು ಭಾಗವಾಗಿದೆ. ಈ ಚರ್ಚ್ ಸಿಕಂದರಬಾದ್‍ನ ತ್ರಿಮುಲ್ಗೇರಿನಲ್ಲಿದೆ. ಮೂಲತಃ ಈ ಚರ್ಚ್ ಗ್ಯಾರಿಸನ್ ಚರ್ಚ್ ಆಗಿದ್ದು, ಸೇನೆಯ ಪಾದ್ರಿಗಳು ಇಲ್ಲಿ ಸಭೆ ಸಮಾರಂಭಗಳನ್ನು ನಡೆಸುತ್ತಿದ್ದರು. ಸ್ವಾತಂತ್ರ್ಯಾನಂತರ ಇದು ಚರ್ಚ್ ಆಫ್ ಸೌತ್ ಇಂಡಿಯಾಗೆ ಹಸ್ತಾಂತರ ಗೊಂಡಿತು. ಇದು ಆಂಗ್ಲಿಕನ್ ಚರ್ಚ್ ಆಗಿದ್ದು, ಹಲವಾರು ತಮಿಳರು ಇಲ್ಲಿ ಪ್ರತಿ ವಾರ ಅನೇಕ ಸೇವಾಕಾರ್ಯಗಳನ್ನು ನಡೆಸಿಕೊಡುತ್ತಾರೆ. ಇಲ್ಲಿ ಪ್ರತಿವಾರವು ತಮಿಳು ಮತ್ತು ಇಂಗ್ಲೀಷ್‍ಗಳಲ್ಲಿ ಪ್ರಾರ್ಥನೆಯನ್ನು ನಡೆಸಲಾಗುತ್ತದೆ.
ಈ ಚರ್ಚ್ ತನ್ನ ಅನುಪಮವಾದ ಗೋಥಿಕ್ ಶೈಲಿಯಿಂದಾಗಿ ಪ್ರವಾಸಿಗರ ವಲಯದಲ್ಲಿ ಖ್ಯಾತಿಪಡೆದಿದೆ. ಈ ಚರ್ಚ್ ಗಂಟಾಗೋಪುರ ಹಾಗು ಗೋಪುರಗಳನ್ನು ಒಳಗೊಂಡಿದೆ. ಅತ್ಯಂತ ಸೂಕ್ಷ್ಮವಾದ ಮತ್ತು ಸುಂದರವಾದ ಗಾಜಿನ ಕಿಟಕಿಯನ್ನು ( ಏಸುವಿನ ಚಿತ್ರವನ್ನು ಹೊಂದಿರುವಂತಹುದು) ಇಲ್ಲಿ ಪವಿತ್ರ ಪೀಠವನ್ನಾಗಿ ಪೂಜಿಸಲಾಗುತ್ತಿದೆ. ಇದನ್ನು ರಾಯಲ್ ಆರ್ಟಿಲೆರಿಗೆ ಸೇರಿದ ಲೆಫ್ಟಿನೆಂಟ್ ಎಡ್ವರ್ಡ್ ಡಾಸನ್‍ರವರ ಸ್ಮರಣಾರ್ಥವಾಗಿ 1884ರಲ್ಲಿ ಸ್ಥಾಪಿಸಲಾಯಿತು. ಈ ಚರ್ಚ್‍ಗೆ 1983ರಲ್ಲಿ ಎಲಿಝಬೆತ್ ರಾಣಿ ಭೇಟಿಕೊಟ್ಟಾಗ ಇದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಗಳಿಸಿತು.


Click it and Unblock the Notifications