Search
 • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಗೋಲ್ಕೊಂಡಾ ಕೋಟೆ

ಗೋಲ್ಕೊಂಡಾ ಕೋಟೆ, ಹೈದರಾಬಾದ್

14

ಗೋಲ್ಕೊಂಡಾ ಕೋಟೆ ಅಥವಾ ಗೊಲ್ಲ ಕೊಂಡ ಕೋಟೆಯು ಕುರಿಗಾಹಿಗಳ ದಿಬ್ಬ ಎಂಬ ಅರ್ಥವನ್ನು ಸೂಚಿಸುತ್ತದೆ. ಈ ಕೋಟೆಯನ್ನು ಹೈದರಬಾದಿನಿಂದ 11 ಕಿ.ಮೀ ದೂರದಲ್ಲಿ 15ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಗೋಲ್ಕೊಂಡಾ ಒಂದಾನೊಂದು ಕಾಲದಲ್ಲಿ ವೈಭವಯುತವಾಗಿದ್ದ ನಗರವಾಗಿತ್ತು. ಆದರೆ ಇಂದು ನಾವು ಇಲ್ಲಿ ಆ ಗತಕಾಲದ ವೈಭವವನ್ನು ಕೇವಲ ಅಳಿದುಳಿದ ಅವಶೇಷಗಳಲ್ಲಿ ಮಾತ್ರ ಕಾಣಬಹುದು. ಈ ಪ್ರದೇಶವು ತನ್ನಲ್ಲಿ ದೊರಕಿದ ವಿಶ್ವವಿಖ್ಯಾತ ವಜ್ರ ವೈಢೂರ್ಯಗಳಾದ ಕೊಹಿನೂರ್, ಐಡಲ್ಸ್ ಐ ಮತ್ತು ಹೋಪ್ ಡೈಮಂಡ್ ಗಳಿಗಾಗಿ ಪ್ರಸಿದ್ಧವಾಗಿದೆ.

ಗೋಲ್ಕೊಂಡಾ ಕೋಟೆಯನ್ನು 1512 ನೇ ಇಸವಿಯಲ್ಲಿ ಈ ನಗರವನ್ನು ಆಳಿದ ಖುತುಬ್ ಷಾಹಿ ಸಾಮ್ರಾಜ್ಯದ ಅರಸರು ನಿರ್ಮಿಸಿದರು. ಖುಲಿ ಖುತುಬ್ ಷಾಹ್ ವಾಲಿಯ ಅವಧಿಯಲ್ಲಿ ಈ ಕೋಟೆಯ ಬಹುಪಾಲು ಭಾಗವು ನಿರ್ಮಾಣಗೊಂಡಿತು. ಈ ಕೋಟೆಯನ್ನು ಉತ್ತರ ಭಾರತದ ಮೊಘಲರ ದಾಳಿಯಿಂದ ರಕ್ಷಿಸುವ ಸಲುವಾಗಿ ನಿರ್ಮಿಸಲಾಯಿತು. ಈ ಕೋಟೆಯ ವಿಶೇಷ ಅಂಶವೆಂದರೆ ಇಲ್ಲಿನ ಧ್ವನಿವ್ಯವಸ್ಥೆ, ಅದು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಸೇರಿದೆ.

ನೀವು ಈ ಕೋಟೆಯ ಆವರಣದಲ್ಲಿ ನಿಂತು ಚಪ್ಪಾಳೆ ಬಾರಿಸಿದರೆ, ಅದರ ಪ್ರತಿಧ್ವನಿಯು ಮುಖ್ಯ ಪ್ರವೇಶ ದ್ವಾರದಿಂದ 91 ಮೀಟರ್ ಎತ್ತರದಲ್ಲಿರುವ ಭಾಗಕ್ಕು ಕೇಳುತ್ತದೆ. ಅಲ್ಲದೆ ನಂಬಿಕೆಗಳ ಪ್ರಕಾರ ಗೋಲ್ಕೊಂಡಾ ಕೋಟೆಯಿಂದ ಚಾರ್ ಮಿನಾರಿಗೆ ಒಂದು ರಹಸ್ಯ ಸುರಂಗ ಮಾರ್ಗವಿದೆಯಂತೆ. ಆದರೆ ಅದರ ಕುರುಹುಗಳು ಮತ್ತು ಸಾಕ್ಷಿಗಳು ಯಾವುವು ಇದುವರೆಗು ದೊರೆತಿಲ್ಲ.

One Way
Return
From (Departure City)
To (Destination City)
Depart On
24 Jun,Thu
Return On
25 Jun,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Jun,Thu
Check Out
25 Jun,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Jun,Thu
Return On
25 Jun,Fri