Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ರಾಮೋಜಿ ಫಿಲ್ಮ್ ಸಿಟಿ

ರಾಮೋಜಿ ಫಿಲ್ಮ್ ಸಿಟಿ, ಹೈದರಾಬಾದ್

6

ರಾಮೋಜಿ ಫಿಲ್ಮ್ ಸಿಟಿಯು ಹೈದರಬಾದಿನ ಹೊರವಲಯದಲ್ಲಿ ನೆಲೆಗೊಂಡಿದೆ. ಇದು ಕೇವಲ ಚಲನಚಿತ್ರಗಳ ಮತ್ತು ಧಾರವಾಹಿಗಳ ಚಿತ್ರೀಕರಣ ಸ್ಥಳವಷ್ಟೇ ಅಲ್ಲದೆ ವಿಹಾರಕ್ಕು ಸಹ ಹೇಳಿ ಮಾಡಿಸಿದ ತಾಣವಾಗಿದೆ. ಥೀಮ್ ಆಧಾರಿತ ಕೂಟಗಳು, ಕಾರ್ಪೋರೇಟ್ ಸಮಾರಂಭಗಳು, ಅದ್ಧೂರಿ ಮದುವೆಗಳು, ಸಾಹಸ ಶಿಬಿರಗಳು, ಸಮಾವೇಶಗಳು ಹಾಗು ಮಧುಚಂದ್ರಗಳಿಗು ಇದು ಪ್ರಶಸ್ತವಾದ ತಾಣವಾಗಿದೆ. ಈ ಚಲನಚಿತ್ರ ಚಿತ್ರೀಕರಣ ಕೇಂದ್ರವು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿಂದ ಅತ್ಯಂತ ದೊಡ್ಡ ಸ್ಟುಡಿಯೋ ಎಂಬ ಕೀರ್ತಿಗೆ ಪಾತ್ರವಾಗಿದೆ. ರಾಮೋಜಿ ಫಿಲ್ಮ್ ಸಿಟಿಯು ಚಲನಚಿತ್ರ ನಿರ್ಮಾತೃಗಳಿಗೆ ಬೇಕಾದ ಎಲ್ಲ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಅವರ ಕೆಲಸ ಸರಾಗವಾಗಿ ನೆರವೇರಲು ಸಹಾಯ ಮಾಡುತ್ತಿದೆ.

ನಂಬಿಕೆಗಳ ಪ್ರಕಾರ ಇಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರು ಕೇವಲ ತಮ್ಮ ಚಿತ್ರಕಥೆಯೊಂದಿಗೆ ಇಲ್ಲಿಗೆ ಬಂದರೆ, ಆ ಚಿತ್ರವನ್ನು ಸಂಪೂರ್ಣವಾಗಿಸಿಕೊಂಡು ಮೊದಲ ಪ್ರತಿಯೊಂದಿಗೆ ಇಲ್ಲಿಂದ ಹೊರಗೆ ಹೋಗಬಹುದು ಎಂದು ಹೇಳಲಾಗುತ್ತದೆ. ಚಿತ್ರೀಕರಣದ ಜೊತೆಗೆ ಈ ಸ್ಥಳವು ಹಲವಾರು ಮನೋರಂಜನೆಯ ಆಯ್ಕೆಗಳನ್ನು ಇಲ್ಲಿಗೆ ಭೇಟಿಕೊಡುವ ವೀಕ್ಷಕರಿಗೆ ಒದಗಿಸುತ್ತದೆ. ಸವಾರಿಗಳು, ವಿನೋದದ ಆಟಗಳು, ಸಂಗೀತ ಆಧಾರಿತ ಕಾರ್ಯಕ್ರಮಗಳು, ಆಟಗಳು, ಸಂಪೂರ್ಣವಾಗಿ ಕೌಟುಂಬಿಕ ಮನೋರಂಜನೆಗೆ ಮೀಸಲಾದ ನೃತ್ಯ ಕಾರ್ಯಕ್ರಮಗಳು ಇಲ್ಲಿ ಲಭ್ಯವಿದೆ. ನಿಮ್ಮ ವಿರಾಮಕಾಲದಲ್ಲಿ ಈ ಫಿಲ್ಮ್ ಸಿಟಿಯಲ್ಲಿ ನೀವು ವ್ಯಾಪಾರ ಮಾಡಬಹುದು ಮತ್ತು ನಿಮಗೆ ಬೇಕೆನಿಸಿದ್ದನ್ನು ತಿನ್ನಬಹುದು.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun