Search
 • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಚಾರ್ ಮಿನಾರ್

ಚಾರ್ ಮಿನಾರ್, ಹೈದರಾಬಾದ್

8

ಚಾರ್ ಮಿನಾರ್ ಅನ್ನು ಮಹಮ್ಮದ್ ಖುಲಿ ಖುತುಬು ಷಾಹಿಯು 1591ರಲ್ಲಿ ನಿರ್ಮಿಸಿದನು. ಇಂದು ಇದು ಹೈದರಬಾದಿನ ಪ್ರಮುಖ ಹೆಗ್ಗುರುತಾಗಿ ಗುರುತಿಸಲ್ಪಡುತ್ತಿದೆ. ಈ ಐತಿಹಾಸಿಕ ರಚನೆಯು ಹೈದರಬಾದ್‍ನೊಂದಿಗೆ ದೊಡ್ಡ ಮಟ್ಟದ ಭಾಂದವ್ಯವನ್ನು ಹೊಂದಿದ್ದು, ವಿಶ್ವ ಮಟ್ಟದಲ್ಲಿ ಅತಿ ಹೆಚ್ಚಿನ ಮನ್ನಣೆಯನ್ನು ತಂದುಕೊಡುತ್ತಿದೆ. ಚಾರ್ ಮಿನಾರ್ ಎಂಬುದು "ಚಾರ್" ಮತ್ತು "ಮಿನಾರ್" ಎಂಬ ಎರಡು ಉರ್ದು ಪದಗಳಿಂದ ಉತ್ಪತ್ತಿಯಾದ ಪದವಾಗಿದೆ. ಇದರರ್ಥ ನಾಲ್ಕು ಗೋಪುರಗಳು. ಈ ಕಟ್ಟಡ ವಿನ್ಯಾಸ ಮತ್ತು ರಚನೆಯು ಗತಕಾಲದ ವಾಸ್ತುಶಿಲ್ಪಕಲೆಯನ್ನು ಪ್ರತಿನಿಧಿಸುತ್ತದೆ. ಈ ಕಟ್ಟಡವು ವಿಲಕ್ಷಣವಾದ ಮತ್ತು ಕಣ್ಣುಕೋರೈಸುವ ಮಿನಾರುಗಳನ್ನು ಮತ್ತು ನಾಲ್ಕು ಮೂಲೆಯಲ್ಲಿ ಭವ್ಯವಾಗಿ ತೋರುವ ಕಮಾನುಗಳಿಂದ ಕೂಡಿದೆ. ಈ ಕಮಾನುಗಳು ಮಿನಾರುಗಳಿಗೆ ಆಧಾರವನ್ನು ಒದಗಿಸಿವೆ. ಖುಲಿ ಖುತುಬ್ ಷಾಹಿಯು ಗೊಲ್ಕೊಂಡಾದಿಂದ ಹೈದರಬಾದಿಗೆ ರಾಜಧಾನಿಯನ್ನು ಸ್ಥಳಾಂತರಗೊಳಿಸಿದ ನಂತರ ಚಾರ್ ಮಿನಾರನ್ನು ಕಟ್ಟಲಾಯಿತು.

ಈ ಸ್ಮಾರಕವನ್ನು ನಗರದಿಂದ ಪ್ಲೇಗನ್ನು ನಿರ್ಮೂಲನೆಗೊಳಿಸಿದ್ದಕ್ಕಾಗಿ ದೈವಶಕ್ತಿಗೆ ಧನ್ಯವಾದಗಳನ್ನು ಅರ್ಪಿಸುವ ಸಲುವಾಗಿ ನಿರ್ಮಿಸಲಾಯಿತು. ಚಾರ್ ಮಿನಾರ್ ಕೇವಲ ತನ್ನ ಭವ್ಯತೆಯಿಂದಷ್ಟೇ ಅಲ್ಲದೆ ತನ್ನ ಗತಕಾಲದ ವರ್ಚಸ್ಸಿನಿಂದಾಗಿಯು ಸಹ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಐತಿಹಾಸಿಕ ವರ್ಚಸ್ಸನ್ನು ನಗರದ ಈ ಭಾಗದಲ್ಲಿ ನಾವು ಇಂದಿಗು ಕಾಣಬಹುದು.

One Way
Return
From (Departure City)
To (Destination City)
Depart On
24 Jun,Thu
Return On
25 Jun,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Jun,Thu
Check Out
25 Jun,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Jun,Thu
Return On
25 Jun,Fri