Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಹವಾಮಾನ

ಹೈದರಾಬಾದ್ ಹವಾಮಾನ

ಹೈದರಬಾದಿಗೆ ಭೇಟಿಕೊಡಲು ಅತ್ಯುತ್ತಮ ಕಾಲವೆಂದರೆ ಅದು ಚಳಿಗಾಲ. ಆಗ ಇಲ್ಲಿನ ಹವೆಯು ಬಿಸಿಲು ಅಲ್ಲದೆ ಅಷ್ಟೇನು ತಂಪು ಅಲ್ಲದೆ ಇರುತ್ತದೆ. ಚಳಿಗಾಲದಲ್ಲಿ ಹೈದರಬಾದ್ ತಂಪಾಗಿ, ಬೆಚ್ಚಗೆ ಮುದನೀಡುವ ಹವಾಗುಣವನ್ನು ಹೊಂದಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅನೂಕಲಕರವಾಗಿರುತ್ತದೆ. ಆದರು ಇಲ್ಲಿ ರಾತ್ರಿ ಹಾಗು ಸಂಜೆಯ ಸಮಯದಲ್ಲಿ ಸ್ವಲ್ಪ ಚಳಿಯಿರುವುದರಿಂದಾಗಿ ಬೆಚ್ಚಗಿಡುವ ಬಟ್ಟೆಗಳನ್ನು ಕೊಂಡೊಯ್ಯುವುದನ್ನು ಮರೆಯಬೇಡಿ.

ಬೇಸಿಗೆಗಾಲ

ಬೇಸಿಗೆ ಕಾಲದಲ್ಲಿ ಹೈದರಬಾದ್‍ನಲ್ಲಿ ವಿಪರೀತವಾದ ಬಿಸಿಲು ಇದ್ದು, ಉಷ್ಣಾಂಶವು 40 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಸುಡುವ ಬಿಸಿಲು ನಿಮಗೆ ಸುತ್ತಾಡಲು ಅಸೌಕರ್ಯವನ್ನುಂಟು ಮಾಡುತ್ತದೆ. ಇಲ್ಲಿನ ಬಿಸಿಲು ನಿಮ್ಮನ್ನು ಕಪ್ಪಗೆ ಮಾಡುವಷ್ಟು ಸುಡುವುದಷ್ಟೇ ಅಲ್ಲದೆ ನಿರ್ಜಲೀಕರಣದ ಸಮಸ್ಯೆಯನ್ನು ತಂದೊಡ್ಡುತ್ತದೆ.

ಮಳೆಗಾಲ

ಮಳೆಗಾಲದಲ್ಲಿ ಹೈದರಬಾದಿನಲ್ಲಿ ಮುದ ನೀಡುವ ವಾತಾವರಣದಿಂದ ಕೂಡಿರುತದೆ. ಆಗ ಇಲ್ಲಿ ಉಶ್ಣಾಂಶದ ಜೊತೆಗೆ ಆರ್ಧ್ರತೆಯು ಏರುತ್ತಿರುತ್ತದೆ. ಮಳೆಗಾಲವು ಇಲ್ಲಿ ಜೂನ್‍ನಿಂದ ಸೆಪ್ಟೆಂಬರ್ ವರೆಗು ಇರುತ್ತದೆ. ಈ ಸಮಯದಲ್ಲಿ ಇಲ್ಲಿ ಅತ್ಯಧಿಕ ಮಳೆ ಬೀಳುತ್ತಿರುತ್ತದೆ. ಮಳೆಯ ಕಾರಣ ಹೊರಗಿನ ಪ್ರವಾಸಿ ತಾಣಗಳನ್ನು ನೋಡಲು ಅನಾನುಕೂಲವಾಗುತ್ತದೆ.

ಚಳಿಗಾಲ

ಹೈದರಬಾದಿನಲ್ಲಿ ಅಂತಹ ಕೊರೆಯುವ ಚಳಿಯಿರುವುದಿಲ್ಲ. ಆದಾಗಿಯು ಸಂಜೆ ಮತ್ತು ಮುಂಜಾನೆ ಸಮಯದಲ್ಲಿ ಸ್ವಲ್ಪ ಚಳಿಯಿರುತ್ತದೆ. ಒಂದು ಸ್ವೆಟರ್ ಅಥವಾ ಲಘು ಜಾಕೆಟ್ ಇದ್ದರೆ ಸಾಕು ಹೈದರಬಾದಿನ ಚಳಿಯನ್ನು ತಡೆಯಬಹುದು. ಚಳಿಗಾಲವು ಇಲ್ಲಿ ನವೆಂಬರ್ ನಲ್ಲಿ ಪ್ರಾರಂಭವಾಗಿ ಜನವರಿಯವರೆಗು ಇರುತ್ತದೆ. ಆಗ ಇಲ್ಲಿ ಉಷ್ಣಾಂಶವು 19 ಡಿಗ್ರಿ ಸೆಲ್ಶಿಯಸ್ ಇರುತ್ತದೆ.