ತಾರಮತಿ ಬರದರಿ ಎನ್ನುವುದು ಗೋಲ್ಕೊಂಡಾ ಏಳನೆ ಸುಲ್ತಾನನಾದ ಅಬ್ದುಲ್ಲ ಖುತುಬ್ ಷಾನಿಂದ ನಿರ್ಮಾಣಗೊಂಡ ಸರೈ ಆಗಿದೆ. ಈ ಸರೈ ಅನ್ನು ಇಬ್ರಾಹಿಂ ಖುಲಿ ಖುತುಬ್ ಷಾಹ್ ನಿರ್ಮಿಸಿದ ಇಬ್ರಾಹಿಂ ಬಾಗ್ ಉದ್ಯಾನವನದ ಆವರಣದೊಳಗೆ ನಿರ್ಮಿಸಲಾಗಿದೆ. ಈ ನಗರಕ್ಕೆ ಬರುವ ಪ್ರವಾಸಿಗರಿಗೆ ವಿಶ್ರಾಂತಿಯನ್ನು ಒದಗಿಸುವ ಸಲುವಾಗಿ ಇದನ್ನು ಮೂಸಿ ನದಿಯ ದಂಡೆಯ ಮೇಲೆ ಕಟ್ಟಲಾಗಿದೆ. ದಂತಕಥೆಯ ಪ್ರಕಾರ ಈ ಬರದರಿಯನ್ನು ತಾರಮತಿ ಮತ್ತು ಆಕೆಯ ಸೋದರಿ ಪ್ರೇಮಮತಿ ಎಂಬ ವಾರಂಗನೆಯರಿಗೆ ಗೌರವವನ್ನು ಸೂಚಿಸಲು ನಿರ್ಮಿಸಲಾಯಿತು.
ಈ ಇಬ್ಬರು ಸೋದರಿಯರು ಅಬ್ದುಲ್ಲ ಖುತುಬ್ ಷಾನ ಆಸ್ಥಾನದಲ್ಲಿದ್ದರು. ಇವರು ಗಾಯನ ಮತ್ತು ನೃತ್ಯಗಳಲ್ಲಿ ಅತ್ಯಂತ ಪ್ರತಿಭಾವಂತರಾಗಿದ್ದರು. ಇವರಿಗೆ ಆಸ್ಥಾನದಲ್ಲಿ ಅತ್ಯಂತ ಮನ್ನಣೆ ದೊರೆತಿತ್ತು. ಹಾಗಾಗಿ ಇವರನ್ನು ಖುತುಬ್ ಷಾಹಿ ಸುಲ್ತಾನ್ ಮತ್ತು ಅವನ ಕುಟುಂಬಸ್ತರನ್ನು ಸಮಾಧಿ ಮಾಡಿರುವ ಸ್ಥಳದಲ್ಲಿಯೇ ಸಮಾಧಿ ಮಾಡಲಾಗಿದೆ.


Click it and Unblock the Notifications