ಹೈದರಬಾದಿನಲ್ಲಿರುವ ಸ್ಪಾನಿಶ್ ಮಸೀದಿಯು ಐವಾನ್- ಇ-ಬೇಗಂ ಪೇಟ್ ಅಥವಾ ಮಸ್ಜೀದ್ ಇಕ್ಬಾಲ್ ಇಕ್ಬಲ್ ಉದ್ ದೌಲ ಎಂದು ಸ್ಥಳೀಯರಿಂದ ಕರೆಯಲ್ಪಡುತ್ತಿದೆ. ಇದು ಈ ಬಗೆಯಲ್ಲಿ ಭಾರತದಲ್ಲಿರುವ ಏಕೈಕ ಮಸೀದಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಪೈಗಾದ ನವಾಬನಾದ ನವಾಬ್ ಸಿರ್ ಇಕ್ಬಾಲ್ ಉದ್ ದೌಲನು ಒಮ್ಮೆ ಸ್ಪೇನ್‍ಗೆ ಭೇಟಿಕೊಟ್ಟಾಗ ಅಲ್ಲಿದ್ದ ಕ್ಯಾಥೇಡ್ರಲ್ - ಮಾಸ್ಕ್ಯೂ ಆಫ್ ಕೊರ್ಡೊಬದ ವಾಸ್ತುಶಿಲ್ಪಕ್ಕೆ ಹಾಗು ಅದರ ಶೈಲಿಗೆ ಮರುಳಾದನಂತೆ. ಸ್ಪೇನ್‍ನಿಂದ ಹಿಂತಿರುಗಿದ ನಂತರ ಆತನು ಸ್ಪೇನಿಷ್ ಮಸೀದಿಯನ್ನು ಕಟ್ಟಲು 1904ರಲ್ಲಿ ಆರಂಭಿಸಿದನಂತೆ.
ಈ ಮಸೀದಿಯು ಸ್ಪೇನಿನ ಕ್ಯಾಥೇಡ್ರಲ್ - ಮಾಸ್ಕ್ಯೂ ಆಫ್ ಕೊರ್ಡೊಬದ ಮಾದರಿಯನ್ನೆ ಅನುಸರಿಸಿ ನಿರ್ಮಿಸಲಾಗಿದೆ. ಆದಾಗಿಯು ಈ ಮಸೀದಿಯು ವಾಸ್ತುಶಿಲ್ಪದ ವಿಚಾರದಲ್ಲಿ ಕರ್ನಾಟಕದ ಗುಲ್ಬರ್ಗಾದಲ್ಲಿರುವ ಜಾಮ ಮಸೀದಿಯಿಂದ ಹೆಚ್ಚಿನ ಸ್ಫೂರ್ತಿಯನ್ನು ಪಡೆದಿರುವುದನ್ನು ಕಾಣಬಹುದು. ಅಪರೂಪವಾದ ಮೂರ್ ವಾಸ್ತು ಶಿಲ್ಪದ ಕಲೆಯನ್ನು ಈ ಮಸೀದಿಯಲ್ಲಿ ಬಳಸಿರುವ ಕಾರಣವಾಗಿ ಇದಕ್ಕೆ ಮೂರ್ ಮಸೀದಿ ಎಂಬ ಹೆಸರು ಸಹ ಬಂದಿದೆ. ಈ ಮಸೀದಿಯು ನೋಡಲು ಹೊರಗಿನಿಂದ ಚರ್ಚ್‍ನಂತೆ ಕಾಣುವುದರಿಂದಾಗಿ ವಿಶ್ವದೆಲ್ಲೆಡೆ ಜನಪ್ರಿಯತೆಯನ್ನು ಗಳಿಸಿದೆ.


Click it and Unblock the Notifications