Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಸ್ನೋ ವರ್ಲ್ಡ್

ಸ್ನೋ ವರ್ಲ್ಡ್, ಹೈದರಾಬಾದ್

3

ಸ್ನೋ ವರ್ಲ್ಡ್ ಎಂಬುದು ಹೈದರಬಾದಿನಲ್ಲಿರುವ ಒಂದು ಮನೋರಂಜನಾ ತಾಣವಾಗಿದ್ದು, ಈ ಬಗೆಯಲ್ಲಿ ಇದು ದೇಶದ ಪ್ರಪ್ರಥಮ ಮನೋರಂಜನಾ ತಾಣವೆಂಬ ಕೀರ್ತಿಗೆ ಪಾತ್ರವಾಗಿದೆ. ಇದನ್ನು ಸಾರ್ವಜನಿಕರಿಗಾಗಿ 2004ನೇ ಇಸವಿಯಲ್ಲಿ ತೆರೆಯಲಾಯಿತು. ಇದು ಒಂದು ದಿನಕ್ಕೆ ಸುಮಾರು 2400 ಜನರಿಗೆ ಪ್ರವೇಶಾವಕಾಶವನ್ನು ಒದಗಿಸುವ ಮಟ್ಟಿಗೆ ಇದೆ. ಹೆಸರೆ ಸೂಚಿಸುವಂತೆ ಈ ಉದ್ಯಾನವನದಲ್ಲಿ ಕೃತಕವಾಗಿ ಸುರಿಯುವ ಹಿಮ ಮತ್ತು ಹಿಮವರ್ಷವನ್ನು ಅನುಭವಿಸಬಹುದು. ಹಿಮದ ಪದರಗಳು ಈ ಉದ್ಯಾನವನದ ನೆಲದ ಮೇಲೆ ಬಿದ್ದಿರುತ್ತವೆ. ಪ್ರವಾಸಿಗರು ಇಲ್ಲಿ ಹಿಮದ ಚೆಂಡುಗಳನ್ನು ಮಾಡಿ ಇತರರ ಮೇಲೆ ತೂರಬಹುದು ಹಾಗು ಹಿಮದಲ್ಲಿ ಮಾನವನ ಗೊಂಬೆಗಳನ್ನು ನಿರ್ಮಿಸಬಹುದು.

ಈ ಹಿಮವನ್ನು ನಾಲ್ಕು ಬಾರಿ ಶುದ್ಧೀಕರಿಸಿದ ನೀರಿನಿಂದ ತಯಾರು ಮಾಡಲಾಗಿರುತ್ತದೆ. ಹಾಗಾಗಿ ಇದು ಮಕ್ಕಳಿಗು ಸಹ ಅತ್ಯಂತ ಸುರಕ್ಷಿತ. ನೀವು ಈ ಉದ್ಯಾನವನಕ್ಕೆ ಭೇಟಿಕೊಡುವ ಮೊದಲು ಇಲ್ಲಿನ ಚಳಿಯಿಂದ ರಕ್ಷಿಸಿಕೊಳ್ಳಲು  ದಪ್ಪನಾದ ಉಣ್ಣೆಯ ಬಟ್ಟೆಗಳನ್ನು ಧರಿಸಿರಬೇಕಾದುದು ಅತ್ಯಾವಶ್ಯಕ. ನೀವು ಇದರೊಳಗೆ ಕಾಲಿಟ್ಟ ಕೂಡಲೆ ನಿಮಗೆ ಬಿಸಿ ಬಿಸಿಯಾದ ಸೂಪ್ ಅನ್ನು ಒದಗಿಸುತ್ತಾರೆ. ಇದು ನಿಮ್ಮ ದೇಹವನ್ನು ಬೆಚ್ಚಗೆ ಮಾಡುತ್ತದೆ. ಈ ಪಾರ್ಕಿನ ಒಳಗಡೆ ಟ್ಯೂಬ್ ಸ್ಲೈಡ್, ಐಸ್-ಬಂಪಿಂಗ್ ಕಾರುಗಳು, ಐಸ್ ಸ್ಕೇಟಿಂಗ್ ರಿಂಕ್, ಸ್ನೋ ವಾರ್ ಝೋನ್ ಮತ್ತು ಹಿಮದ ಜಾರು ಬಂಡಿಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun