Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಸಮೀರ್‍ ಪೇಟ್

ಸಮೀರ್‍ ಪೇಟ್, ಹೈದರಾಬಾದ್

3

ಸಮೀರ್ ಪೇಟ್ ಎಂಬುದು ಹೈದರಬಾದಿನ ಹೊರಗೆ ನೆಲೆಗೊಂಡಿರುವ ಒಂದು ಉಪನಗರವಾಗಿದ್ದು, ಇದು ಸಿಕಂದರಬಾದಿನಿಂದ 20 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಸ್ಥಳವು ವಾಸಕ್ಕೆ ಅನುಕೂಲಕರವಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಬಿರ್ಲಾ ತಾಂತ್ರಿಕ ವಿಙ್ಞಾನ ಸಂಸ್ಥೆ, ಪಿಲಾನಿ- ಹೈದರಬಾದ್, ನಲ್ಸಾರ್ ಕಾನೂನು ವಿಶ್ವವಿದ್ಯಾನಿಲಯ, ಜೆನೋಮ್ ವ್ಯಾಲಿಗಳು ಸಹ ನೆಲೆಗೊಂಡಿವೆ. ಸಮೀರ್ ಪೇಟ್ ಕೆರೆ ಸಹ ಇದೇ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಈ ಮಾನವ ನಿರ್ಮಿತಕೆರೆಯನ್ನು ನಿಜಾಮರ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣ ಮಾಡಲಾಯಿತು. ಈ ಕೆರೆಯು ಶಾಲಾ/ಕಾಲೇಜು ವಿಹಾರಕ್ಕೆ ಮತ್ತು ಕೌಟುಂಬಿಕ ವಿಹಾರಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ.

ಈ ಕಾರಣಕ್ಕಾಗಿ ಇದು ಸ್ಥಳೀಯ ಜನರ ಅತ್ಯಂತ ಜನಪ್ರಿಯ ತಾಣವಾಗಿದೆ. ಇಲ್ಲಿ ಬಂದಾಗ ಇಂತಹ ತಂಡಗಳನ್ನು ನೀವೂ ಸಹ ಕಾಣಬಹುದು. ಅಲ್ಲದೆ ಈ ಕೆರೆಯ ಸುತ್ತಮುತ್ತ ಹಲವಾರು ಉಪಾಹಾರ ಗೃಹಗಳು ಇದ್ದು ವಾರಂತ್ಯದ ವಿಹಾರಗಳಿಗೆ ಬರುವವರಿಗೆ ಅನುಕೂಲವನ್ನು ಒದಗಿಸುತ್ತಿವೆ. ಇದರೊಂದಿಗೆ ಈ ಕೆರೆಯ ಬಳಿ ಒಂದು ಕ್ಲಬ್ ಮತ್ತು ರೆಸಾರ್ಟ್ ಸಹ ಇದೆ. ಸಮೀರ್ ಪೇಟ್‍ನಲ್ಲಿ ಒಂದು ಜಿಂಕೆ ಉದ್ಯಾನವನ ಸಹ ಇದೆ. ಈ ಉದ್ಯಾನವನದಲ್ಲಿ  ಜಿಂಕೆಗಳ ಜೊತೆಗೆ ನವಿಲು ಒಳಗೊಂಡಂತೆ ಹಲವಾರು ಪಕ್ಷಿಗಳನ್ನು ಸಹ ಇಡಲಾಗಿದೆ. ಈ ಉದ್ಯಾನವನವು ಸಮೀರ್ ಪೇಟ್ ಕೆರೆಗೆ ಅತ್ಯಂತ ಸನೀಹದಲ್ಲಿದೆ. ಹಲವಾರು ತೆಲುಗು ಚಲನಚಿತ್ರಗಳು ಈ ಕೆರೆ, ಉದ್ಯಾನವನದ ಸುತ್ತಮುತ್ತ ಚಿತ್ರೀಕರಣಗೊಂಡಿವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat