Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಸಂಘಿ ದೇವಾಲಯ

ಸಂಘಿ ದೇವಾಲಯ, ಹೈದರಾಬಾದ್

1

ಸಂಘಿ ದೇವಾಲಯವು ಹೈದರಬಾದ್‍ನ ಹೊರವಲಯದಲ್ಲಿರುವ ಸಂಘಿ ನಗರದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಒಂದು ಬೃಹತ್ ರಾಜಗೋಪುರವನ್ನು ಹೊಂದಿದೆ. ಈ ದೇವಾಲಯವು ಸ್ಥಳೀಯರ ಪಾಲಿಗೆ ಅತ್ಯಂತ ಪವಿತ್ರವಾದ ದೇವಾಲಯವಾಗಿದೆ. ಈ ದೇವಾಲಯದ ಗೋಪುರವನ್ನು ಬಹುದೂರದಿಂದಲೆ ಕಾಣಬಹುದು. ಈ ದೇವಾಲಯವು ಪರಮಾನಂದ ಗಿರಿ ಎಂದು ಕರೆಯಲ್ಪಡುವ ಒಂದು ಸಣ್ಣ ದಿಬ್ಬದ ಮೇಲೆ ಅತ್ಯಂತ ಆಕರ್ಷಕವಾಗಿ ನೆಲೆಗೊಂಡಿದೆ. ಈ ದೇವಾಲಯದಲ್ಲಿರುವ ದೇವರ ಆಶೀರ್ವಾದ ಪಡೆಯುವ ಸಲುವಾಗಿ ಸಹಸ್ರಾರು ಭಕ್ತರು ಪ್ರತಿವರ್ಷ ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ.

ಬಹುತೇಕ ಪ್ರವಾಸಿಗರು ಪ್ರತಿ ವರ್ಷವು ಇಲ್ಲಿನ ನಯನಮನೋಹರವಾದ ದೇವಾಲಯವನ್ನು ನೋಡಲು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಈ ದೇವಾಲಯವು ದಕ್ಷಿಣ ಭಾರತದ ವಾಸ್ತುಶಿಲ್ಪಕ್ಕೆ ಸಮರ್ಥ ಉದಾಹರಣೆಯಾಗಿ ನಿಂತಿದೆ. ಈ ದೇವಾಲಯದ ದ್ವಾರದಲ್ಲಿರುವ ಮೆಟ್ಟಿಲುಗಳ ಮೇಲೆ ಭವ್ಯವಾಗಿ ಕೆತ್ತಲಾಗಿರುವ ಕಾವಲು ಕಾಯುತ್ತಿರುವ ಕಲ್ಲಿನ ಆನೆಗಳನ್ನು ನಾವು ಕಾಣಬಹುದು.  ಸಂಘಿ ದೇವಾಲಯವು ಮೂರು ಗೋಪುರಗಳನ್ನು ಹೊಂದಿದೆ. ಇವು ಎಷ್ಟು ಎತ್ತರದಿಂದ ಕೂಡಿವೆ ಎಂದರೆ ಆಕಾಶವನ್ನು ಸ್ಪರ್ಶಿಸುತ್ತವೆಯೇನೊ ಎಂಬಂತೆ ನಿಂತಿವೆ. ಈ ದೇವಾಲಯದ ಮೇಲಂತಿಸ್ತಿನಲ್ಲಿ ಆಂಜನೇಯನ ಮೂರ್ತಿಯನ್ನು ಸ್ಥಾಪಿಸಿರುವುದನ್ನು ನಾವು ಕಾಣಬಹುದು. ಇದು ಹೇಗಿದೆ ಎಂದರೆ ದೇವರು ಅಲ್ಲಿಂದಲೆ ಭಕ್ತಾಧಿಗಳನ್ನು ಆಶೀರ್ವದಿಸುತ್ತಿರುವಂತೆ ಕಾಣುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue