Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಸಲಾರ್ ಜಂಗ್ ವಸ್ತು ಸಂಗ್ರಹಾಲಯ

ಸಲಾರ್ ಜಂಗ್ ವಸ್ತು ಸಂಗ್ರಹಾಲಯ, ಹೈದರಾಬಾದ್

3

ಸಲಾರ್ ಜಂಗ್ ವಸ್ತು ಸಂಗ್ರಹಾಲಯವು ಹೈದರಬಾದಿನ ಶ್ರೀಮಂತ ಮತ್ತು ಭವ್ಯ ಇತಿಹಾಸವನ್ನು ಪ್ರದರ್ಶಿಸುವ ಸಲುವಾಗಿ ಹೆಸರುವಾಸಿಯಾಗಿದೆ. ಈ ವಸ್ತು ಸಂಗ್ರಹಾಲಯವು ದೇಶದ ಮೂರು ರಾಷ್ಟ್ರೀಯ ವಸ್ತು ಸಂಗ್ರಹಾಲಯಗಳಲ್ಲಿ ಒಂದೆಂದೆ ಪರಿಗಣಿಸಲ್ಪಟ್ಟಿರುವುದರಿಂದಾಗಿ, ರಾಷ್ಟ್ರೀಯ ಮಹತ್ವವನ್ನು ಹೊಂದಿದೆ. ಈ ವಸ್ತು ಸಂಗ್ರಹಾಲಯವು ಪರ್ಷಿಯಾ, ಜಪಾನ್, ಯೂರೋಪ್, ಉತ್ತರ ಅಮೆರಿಕಾ, ಚೀನಾ, ನೇಪಾಳ್, ಬರ್ಮಾ, ಈಜಿಪ್ಟ್ ಮತ್ತು ಭಾರತದ ಇತರ ಭಾಗಗಳ ಅಪರೂಪದ ವಸ್ತುಗಳನ್ನು ತನ್ನ ಸಂಗ್ರಹದಲ್ಲಿ ಒಳಗೊಂಡಿದೆ. ಈ ವಸ್ತು ಸಂಗ್ರಹಾಲಯವು ಬೆಲೆಕಟ್ಟಲಾಗದ ಕಾರ್ಪೇಟ್‍, ಪೀಠೋಪಕರಣ, ಶಿಲ್ಪ, ವರ್ಣಚಿತ್ರ, ಹಸ್ತಪ್ರತಿ, ಸೆರಾಮಿಕ್‍, ಜವಳಿ, ಗಡಿಯಾರ, ಮತ್ತು ಲೋಹದ ಉಪಕರಣಗಳನ್ನು ಒಳಗೊಂಡಿದೆ.

ಈ ಎಲ್ಲ ವಸ್ತುಗಳು ಸಲಾರ್ ಜಂಗ್ ಕುಟುಂಬ ಮತ್ತು ಅವರ ವಂಶಿಕರಿಂದ ಸಂಗ್ರಹಿಸಿಡಲಾದಂತಹವುಗಳಾಗಿವೆ. ಈ ಸಂಗ್ರಹವು ತಲೆ ತಲೆಮಾರುಗಳವರೆಗಿನ ವಸ್ತುಗಳನ್ನು ಒಳಗೊಂಡಿದೆ. ಕುತೂಹಲಕಾರಿ ವಿಚಾರವೇನೆಂದರೆ ಇಲ್ಲಿನ ಕೆಲವು ವಸ್ತುಗಳು ಸುಮಾರು ಕ್ರಿ.ಶ 1 ರ ಕಾಲದವರೆಗು ನಮ್ಮನ್ನು ಕೊಂಡೊಯ್ಯುತ್ತವೆ. ಮೂರನೆ ನವಾಬ್ ಮೀರ್ ಯೂಸಫ್ ಅಲಿ ಖಾನ್ ಸಲಾರ್ ಜಂಗ್ ರವರು ಈ ಎಲ್ಲ ವಸ್ತುಗಳನ್ನು ಸಂಗ್ರಹಿಸಲು ತಮ್ಮ ಅಮೂಲ್ಯವಾದ ಆಸ್ತಿಯ ಬಹುಪಾಲು ಭಾಗದ ಜೊತೆಗೆ 35 ವರ್ಷಗಳನ್ನು ಸಹ ಕಳೆದರು. ನಂಬಿಕೆಗಳ ಪ್ರಕಾರ ಇಲ್ಲಿರುವ ಅಮೂಲ್ಯ ವಸ್ತುಗಳು ನಾವು ಏನು ಕಾಣುತ್ತಿದ್ದೇವೆಯೊ ಅದು ಕೇವಲ ಅರ್ಧ ಪಾಲು ಮಾತ್ರ. ಇನ್ನುಳಿದ ಭಾಗವನ್ನು ಇಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು ಲಪಟಾಯಿಸಿದ್ದಾರೆಂದು ಭಾವಿಸಲಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun