Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ರೇಮಂಡ್ಸ್ ಗೋರಿ

ರೇಮಂಡ್ಸ್ ಗೋರಿ, ಹೈದರಾಬಾದ್

2

ರೇಮಂಡ್ಸ್ ಗೋರಿಯಲ್ಲಿ ನಿಜಾಮರ ಸೇನೆಯ ಫ್ರೆಂಚ್ ಸೇನಾಧಿಪತಿಯಾದ ಮೈಖೇಲ್ ಜೋಹಚಿಮ್ ಮೇರಿ ರೇಮಂಡ್‍ರ ಸಮಾಧಿಯನ್ನು ಕಾಣಬಹುದು. ಈ ಸಮಾಧಿಯು ಸುಮಾರು 200 ವರ್ಷಗಳಷ್ಟು ಹಳೆಯದು. ಒಂದಾನೊಂದು ಕಾಲದಲ್ಲಿ ಈ ಗೋರಿಯಲ್ಲಿರುವ ಸಮಾಧಿಗೆ ಸ್ಥಳೀಯರು ಹೂವು ಅಗರಬತ್ತಿಗಳನ್ನು ತಂದು ಪೂಜಿಸುತ್ತಿದ್ದರು. ಅಲ್ಲದೆ ಪ್ರತಿವರ್ಷ ಮಾರ್ಚ್ 25ರಂದು ಸ್ವತಃ ನಿಜಾಮನು ಒಂದು ಪೊಟ್ಟಣ ಚುಟ್ಟಾ ಮತ್ತು ಒಂದು ಬಾಟಲ್ ಬೀರ್ ಅನ್ನು ಇಲ್ಲಿನ ಸಮಾಧಿಗೆ ಅರ್ಪಿಸುತ್ತಿದ್ದನು. 1940 ರ ವರೆಗು ಈ ಸಮಾಧಿಗೆ ಇಲ್ಲಿನ ಸ್ಥಳೀಯರು ದೇಗುಲದ ಸ್ಥಾನಮಾನವನ್ನು ನೀಡಿದ್ದರು. ರೇಮಂಡ್ ನಿಜಾಮರ ಸೈನ್ಯದಲ್ಲಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದನು.

ಅಲ್ಲದೆ ಈತ ಸ್ಥಳೀಯರೊಂದಿಗು ಉತ್ತಮ ಭಾಂದವ್ಯವನ್ನು ಹೊಂದಿದ್ದನು. ಈತನು ಧೈರ್ಯಶಾಲಿ, ವೀರ ಮತ್ತು ಸಚ್ಛಾರಿತ್ರ್ಯವಂತನಾಗಿ ಹೆಸರಾಗಿದ್ದನು. ನಿಜಾಮನು ರೇಮಂಡ್‍ನಿಗೆ ಅತ್ಯುನ್ನತ ಸ್ಥಾನಮಾನವನ್ನು ನೀಡಿದ್ದನು. ಈತನ ಹೆಸರಲ್ಲಿ ಒಂದು ಸಣ್ಣ ಗುಡ್ಡವನ್ನು ಸಹ ನಾವು ಹೈದರಬಾದಿನಲ್ಲಿ ಕಾಣಬಹುದು. ಅದು ಮಲಕ್‍ಪೇಟ್‍ನಲ್ಲಿರುವ ಮುಸ್ಸ ರಾಮ್ ಬಾಗ್ ಎಂದು ಹೆಸರಾಗಿದೆ. ಆದರೆ ದುರ್ದೈವವಶಾತ್ ರೇಮಂಡ್‍ನ ಗೋರಿಯು 2001ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಾಶವಾಯಿತು. ಇದಕ್ಕೆ ಕಾರಣ ಸರಿಯಾದ ನಿರ್ವಹಣೆಯ ಕೊರತೆ. ಆದರೆ ರಾಜ್ಯ ಸರ್ಕಾರವು ಈಗ ಇದನ್ನು ಜೀರ್ಣೋದ್ಧಾರ ಮಾಡಿ ಅದರ ವೈಭವವನ್ನು ಮರಳಿ ತರುವ ಕಾರ್ಯವನ್ನು ಕೈಗೊಂಡಿದೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat