ಮಹಾವೀರ್ ಹರೀನ ವನಸ್ಥಲಿ ರಾಷ್ಟ್ರೀಯ ಉದ್ಯಾನವನವು ಹೈದರಬಾದಿಗೆ ಸಮೀಪದಲ್ಲಿರುವ ವನಸ್ಥಲಿಯಲ್ಲಿ ನೆಲೆಗೊಂಡಿದೆ. ಈ ರಾಷ್ಟ್ರೀಯ ಉದ್ಯಾನವನಕ್ಕೆ ಹೈದರಬಾದ್‍ನಿಂದ ವಿಜಯವಾಡಕ್ಕೆ ಹೋಗುವ ಹೆದ್ದಾರಿಯ ಮೂಲಕ ಸುಲಭವಾಗಿ ತಲುಪಬಹುದು. ಇದೊಂದು ಜಿಂಕೆ ಉದ್ಯಾನವನವಾಗಿದ್ದು, ಇಲ್ಲಿ ಹಲವಾರು ಜಿಂಕೆಗಳ ಪ್ರಬೇಧವನ್ನು ಕಾಣಬಹುದು. ಈ ಉದ್ಯಾನವನವನ್ನು ನಿಜಾಮರ ಕಾಲದಲ್ಲಿ ಶಿಕಾರಿ ತಾಣವನ್ನಾಗಿ ಬಳಸಲಾಗುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಇದನ್ನು ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು. ಈ ಶಿಕಾರಿ ತಾಣವನ್ನು ಇಲ್ಲಿರುವ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳನ್ನು ಸಂರಕ್ಷಿಸುವ ಸಲುವಾಗಿ ರಾಷ್ಟ್ರೀಯ ಉದ್ಯಾನವನವಾಗಿ ಮಾರ್ಪಾಡುಗೊಳಿಸಲಾಯಿತು.
ಇಲ್ಲಿ ಎಗ್ರೆಟ್ಸ್, ಮಿಂಚುಳ್ಳಿ, ಬಕ ಪಕ್ಷಿ, ಭಾರತದ ಗದ್ದೆ ಗೊರವ ಮತ್ತು ಚಿಕ್ಕ ಪಾದದ ಹದ್ದುಗಳನ್ನು ಸಹ ಇಲ್ಲಿ ಕಾಣಬಹುದು. ಹೈದರಬಾದಿನಿಂದ ಈ ರಾಷ್ಟ್ರೀಯ ಉದ್ಯಾನವನಕ್ಕೆ ಬಸ್ಸುಗಳ ಮೂಲಕ ಅಥವಾ ಖಾಸಗಿ ಟ್ಯಾಕ್ಸಿಗಳ ಮೂಲಕ ಸುಲಭವಾಗಿ ತಲುಪಬಹುದು. ಇದರ ಜೊತೆಗೆ ಈ ಉದ್ಯಾನವನದ ಒಳಗಡೆ ಮಾರ್ಗದರ್ಶಿತ ಸಫಾರಿ ಸಹ ಲಭ್ಯವಿದೆ. ಇದರೊಂದಿಗೆ ವೀಕ್ಷಕರಿಗೆ ಪ್ರಾಣಿಗಳನ್ನು ಕಾಣಲು ಅನುಕೂಲವಾಗುವಂತೆ ಒಂದು ಎತ್ತರದ ವೀಕ್ಷಣಾ ಗೋಪುರವನ್ನು ಸಹ ನಿರ್ಮಾಣ ಮಾಡಲಾಗಿದೆ.


Click it and Unblock the Notifications