ಲಾಡ್ ಬಜಾರ್ ಅಥವಾ ಚೂಡಿ ಬಜಾರ್ ಎಂಬುದು ಹೈದರಬಾದ್‍ನ ಹಳೆ ನಗರದಲ್ಲಿ ನೆಲೆಗೊಂಡಿದೆ. ಇದು ಇಲ್ಲಿ ಮಾರಲಾಗುವ ಬಣ್ಣದ ಬಳೆಗಳಿಗಾಗಿ ವಿಶ್ವಖ್ಯಾತಿಯನ್ನು ಗಳಿಸಿದೆ. ಇದೊಂದು ಹಳೆಯ ಮಾರುಕಟ್ಟೆಯಾಗಿದ್ದು, ಖುತುಬ್ ಷಾಹಿ ಮನೆತನದವರು ಹೈದರಬಾದ್ ಅನ್ನು ಆಳುತ್ತಿದ್ದ ಕಾಲದಿಂದಲು ಇದು ಅಸ್ತಿತ್ವದಲ್ಲಿದೆ. ಈ ಮಾರುಕಟ್ಟೆಯು ನಗರದ ಜನನಿಬಿಡ ಪ್ರಾಂತ್ಯದಲ್ಲಿದ್ದು, ಸದಾ ಚಟುವಟಿಕೆಯಿಂದ ಕೂಡಿ ಇಲ್ಲಿ ಗೌಜು ಗದ್ದಲ ಸಾಮಾನ್ಯವಾಗಿರುತ್ತದೆ. ಈ ಮಾರುಕಟ್ಟೆಯು ಚಾರ್ ಮಿನಾರ್ ಮತ್ತು ಚೌಮೊಹಲ್ಲ ಅರಮನೆಗಳಿಗೆ ಸಮೀಪದಲ್ಲಿರುವುದರಿಂದ ಯಾರೇ ಆದರು ಇದನ್ನು ನೋಡಲು ಮರೆಯುವುದು ಅಸಾಧ್ಯ ಎಂದೆ ಹೇಳಬಹುದು.
ಪ್ರತಿ ವರ್ಷವು ಇಲ್ಲಿ ವ್ಯಾಪಾರ ಮಾಡಲು ಸಹಸ್ರಾರು ವಧುಗಳು ತಮ್ಮ ಮದುವೆಯ ಬಳೆಗಳ ವ್ಯಾಪಾರಕ್ಕೆಂದು ಇಲ್ಲಿಗೆ ಬರುತ್ತಾರೆ. ಲಾಡ್ ಬಜಾರಿನಲ್ಲಿ ನೀವು ನಿಮ್ಮ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಲು ಬೇಕಾಗುವ ಹಲವು ವಸ್ತುಗಳು ಇಲ್ಲಿ ಲಭ್ಯವಿದೆ. ಆದಾಗಿಯು ಈ ಮಾರುಕಟ್ಟೆಯು ಹೊಂಬಣ್ಣದ ಎಣ್ಣೆ ಅಥವಾ ಅಮೇರಿಕ ವಜ್ರದಿಂದ ಅಲಂಕರಿಸಲ್ಪಟ್ಟ ಸುಂದರವಾದ ’ ಲಾಡ್’ ಬಳೆಗಳಿಗೆ ಪ್ರಖ್ಯಾತಿಯನ್ನು ಪಡೆದಿದೆ. ಹೈದರಬಾದ್‍ಗೆ ಹೋಗಿ ಲಾಡ್ ಬಜಾರಿಗೆ ಭೇಟಿಕೊಡದಿದ್ದರೆ ಅತ್ಯಂತ ದ್ರೋಹ ಬಗೆದಂತಾಗುತ್ತದೆ.


Click it and Unblock the Notifications