Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಕೋಟಿ

ಕೋಟಿ, ಹೈದರಾಬಾದ್

1

ಕೋಟಿ ಎನ್ನುವುದು ಹೈದರಬಾದಿನ ಒಂದು ವ್ಯಾಪಾರ ಕೇಂದ್ರವಾಗಿದ್ದು, ಕಿಂಗ್ ಕೋಟಿ ಮತ್ತು ರಾಮ್ ಕೋಟಿ ಎಂಬ ಎರಡು ವಿಭಾಗಗಳನ್ನು ಹೊಂದಿದೆ. ಈ ಪ್ರದೇಶಕ್ಕೆ ಕೋಟಿ ರೆಸಿಡೆನ್ಸಿ ಎಂಬ ಹೆಸರು ಬರಲು ಕಾರಣವೇನೆಂದರೆ ಇಲ್ಲಿ ನಿಜಾಮರ ಉಪ ಪತ್ನಿಯರ ಮಹಲ್ ಅಥವಾ ಅಂತಃಪುರವಿದ್ದುದರಿಂದ ಈ ಹೆಸರು ಬಂದಿತು. ನಂತರದ ಕಾಲದಲ್ಲಿ ಈ ಮಹಲನ್ನು ಜೇಮ್ಸ್ ಅಶಿಲಸ್ ಕಿರ್ಕ್‍ಪ್ಯಾಟ್ರಿಕ್‍ರವರ ನಿವಾಸವನ್ನಾಗಿ ಪರಿವರ್ತಿಸಲಾಯಿತು. ಪ್ರಸ್ತುತ ಇದು ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಮಹಿಳಾ ಕಾಲೇಜಿನ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ನೀವು ಹೈದರಬಾದಿನಲ್ಲಿ ಪುಸ್ತಕಗಳಿಗಾಗಿ ಹುಡುಕಾಡುತ್ತಿದ್ದರೆ ಕೋಟಿ ಆ ವಿಚಾರದಲ್ಲಿ ಅತ್ಯುತ್ತಮ ಸ್ಥಳವಾಗಿರುತ್ತದೆ.

ಬಟ್ಟೆ, ಆಭರಣ, ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಇದು ಅತ್ಯುತ್ತಮ ಸ್ಥಳವೆಂಬುದರ ಜೊತೆಗೆ ಪುಸ್ತಕ ಕೊಳ್ಳಲು ಸಹ ಉತ್ತಮ ಮಾರುಕಟ್ಟೆಯನ್ನು ಹೊಂದಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಕೋಟಿಯಲ್ಲಿರುವ ಗುಜರಾತಿ ಗಲ್ಲಿಯಲ್ಲಿ ಅಗ್ಗದ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಕೊಳ್ಳಬಹುದು. ಕೋಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆಂಧ್ರ ಬ್ಯಾಂಕ್‍ಗಳಂತಹ ಪ್ರಸಿದ್ಧ ಬ್ಯಾಂಕ್‍ಗಳ ಶಾಖೆಗಳು ಇವೆ. ಭಾರತದ ಅತ್ಯಂತ ಹಳೆಯ ವೈಧ್ಯಕೀಯ ಕಾಲೇಜ್ ಆದ ಉಸ್ಮಾನಿಯಾ ಮೆಡಿಕಲ್ ಕಾಲೇಜ್‍ನಂತಹ ಶೈಕ್ಷಣಿಕ ಸಂಸ್ಥೆಗಳು ಕೋಟಿಯಲ್ಲಿ ನೆಲೆಗೊಂಡಿವೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat